ಸಿದ್ಧಾರ್ಥಗೆ ದೀಪಿಕಾಳ ಚುಂಬನ ಸೇರಿದಂತೆ ಐಪಿಎಲ್‌ನ ಟಾಪ್ ಏಳು ವಿವಾದಗಳು

ಶುಕ್ರವಾರ, 17 ಏಪ್ರಿಲ್ 2015 (13:12 IST)
ಐಪಿಎಲ್ ಕ್ರಿಕೆಟ್ 2008ರಲ್ಲಿ ಆರಂಭವಾಗಿ ಜನಪ್ರಿಯತೆ ಪಡೆಯಿತು. ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳನ್ನು ಐಪಿಎಲ್ ಆಕರ್ಷಿಸಿರುವ ಜೊತೆಗೆ ಅನೇಕ ವಿವಾದಗಳನ್ನೂ ಜೊತೆಯಲ್ಲಿ ಹಂಚಿಕೊಂಡಿತು. ಕೆಳಗೆ ಟಾಪ್ ಏಳು ಐಪಿಎಲ್ ವಿವಾದಗಳನ್ನು ಕೊಡಲಾಗಿದೆ. 
 
1. 2010ರ ಐಪಿಎಲ್ ಸೆಮಿಫೈನಲ್‌ನಲ್ಲಿ ಚಾಲೆಂಜರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಜಯಗಳಿಸಿದಾಗ ಹರ್ಭಜನ್ ಸಿಂಗ್ ನೀತಾ ಅಂಬಾನಿಯನ್ನು ಮೇಲಕ್ಕೆತ್ತಿ ಆನಂದಿಸಿದ ಕ್ಷಣವು ವಿವಾದಕ್ಕೆ ಎಡೆಮಾಡಿತು. 
 
2.  ಬಾಲಿವುಡ್ ನಟ ಮತ್ತು ಕೆಕೆಆರ್ ಮಾಲೀಕ ಶಾರುಖ್ ಖಾನ್ 2012ರ ಐಪಿಎಲ್ ಪಂದ್ಯ ನಡೆದ ಸ್ಟೇಡಿಯಂನಲ್ಲಿ ಸಾರ್ವಜನಿಕರೆದುರೇ ಸಿಗರೇಟ್ ಎಳೆದರು. 
3.   ಮಾಜಿ ಐಪಿಎಲ್ ಕಮೀಷನರ್ ಲಲಿತ್ ಮೋದಿ ಪ್ರೀತಿ ಜಿಂಟಾರನ್ನು ಮೈಯನ್ನು ದಿಟ್ಟಿಸಿ ನೋಡುವ ಮೂಲಕ ವಿವಾದಕ್ಕೆ ಗುರಿಯಾದರು. 
4.  ದೀಪಿಕಾ ಪಡುಕೋಣೆ ಮತ್ತು ಸಿದ್ಧಾರ್ಥ ಮಲ್ಯ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ವಿಜಯವನ್ನು ಪರಸ್ಪರ ಆಲಂಗಿಸಿಕೊಂಡು ಚುಂಬಿಸುವ ಮೂಲಕ ಆಚರಿಸಿದ್ದು ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿತು.  
 
5. ಶೇನ್ ವಾರ್ನ್ ರಾಜಸ್ಥಾನ ರಾಯಲ್ಸ್ ಗೆಲುವಿನ ಸಂದರ್ಭದಲ್ಲಿ ಲಿಜ್ ಹರ್ಲಿಗೆ ಕಿಸ್ ಕೊಟ್ಟು ಚರ್ಚೆಗೆ ಆಹಾರವಾಗಿದ್ದರು. 
 6. 2008ರಲ್ಲಿ ಐಪಿಎಲ್ ಮೊದಲ ಆವೃತ್ತಿಯಲ್ಲೇ ಮುಂಬೈ ಇಂಡಿಯನ್ಸ್ ನಾಯಕ ಹರ್ಭಜನ್ ಸಿಂಗ್ ಕಿಂಗ್ಸ್ ಇಲೆವನ್ ವೇಗಿ ಎಸ್. ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿ ವಿವಾದದ ಕಿಡಿ ಹೊತ್ತಿಸಿದರು. 
 
 7. ಕೊಲ್ಕತ್ತಾ ನೈಟ್ ರೈಡರ್ಸ್ ಮಾಲೀಕ ಮತ್ತು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ವಾಂಖಡೆ ಸ್ಟೇಡಿಯಂ ಅಧಿಕಾರಿಗಳ ವಿರುದ್ಧ ಕೆಟ್ಟದಾಗಿ ವರ್ತಿಸಿದ್ದರಿಂದ ಕ್ರೀಡಾಂಗಣಕ್ಕೆ ಪ್ರವೇಶಿಸದಂತೆ ಮುಂಬೈ ಕ್ರಿಕೆಟ್ ಸಂಸ್ಥೆ ನಿಷೇಧ ವಿಧಿಸಿತು. 
 

ವೆಬ್ದುನಿಯಾವನ್ನು ಓದಿ