ಐಪಿಎಲ್ 14 ಮುಂದುವರಿದ ಭಾಗ ಭಾರತದಲ್ಲಿ ನಡೆಯಲ್ಲ: ಗಂಗೂಲಿ

ಸೋಮವಾರ, 10 ಮೇ 2021 (09:53 IST)
ಮುಂಬೈ: ಕೊರೋನಾ ಹಾವಳಿಯಿಂದ ಅರ್ಧಕ್ಕೇ ನಿಂತಿರುವ ಐಪಿಎಲ್ 14 ರ ಕೂಟವನ್ನು ಭಾರತದಲ್ಲಿ ನಡೆಸುವುದು ಅಸಾಧ‍್ಯ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.


‘ಇನ್ನುಳಿದ ಐಪಿಎಲ್ ಪಂದ್ಯಗಳನ್ನು ಭಾರತದಲ್ಲಿ ನಡೆಸಲು ಸಾಧ್ಯವಾಗದು. ಹೀಗಾಗಿ ಇಂಗ್ಲೆಂಡ್ ಆಥವಾ ಯುಎಇನಲ್ಲಿ ಉಳಿದ ಪಂದ್ಯಗಳನ್ನು ಆಯೋಜಿಸಬಹುದು. ಆದರೆ ಏನನೂ ಈಗಲೇ ಹೇಳುವುದು ಆತುರದ ನಿರ್ಧಾರವಾಗುತ್ತದೆ’ ಎಂದು ಗಂಗೂಲಿ ಹೇಳಿದ್ದಾರೆ.

ಭಾರತ ತಂಡದ ವೇಳಾಪಟ್ಟಿಯೂ ಬಿಗುವಾಗಿದ್ದು, ಇದರ ನಡುವೆ ಐಪಿಎಲ್ ಗಾಗಿ ಸಮಯ ಮಾಡುವುದು ಕಷ್ಟವಾಗಲಿದೆ. ಹಾಗಾಗಿ ಈಗಲೇ ಏನನ್ನೂ ಹೇಳಲಾಗದು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ