ಐಪಿಎಲ್ ಉಳಿದ ಪಂದ್ಯಗಳು ಯಾವಾಗ?
ಇದರ ನಡುವೆ ಐಪಿಎಲ್ ಉಳಿದ ಪಂದ್ಯ ನಡೆಸಲು ಸಮಯ ಹೊಂದಿಸುವುದು ಹೇಗೆ ಎಂಬ ಪ್ರಶ್ನೆ ಎದ್ದಿದೆ. ಈ ವರ್ಷವೇ ಐಪಿಎಲ್ 14 ರನ್ನು ಸಮಾಪ್ತಿಗೊಳಿಸಬೇಕೆಂದರೆ ಬಿಸಿಸಿಐ ಉಳಿದ ಪಂದ್ಯಗಳಲ್ಲಿ ಕಡಿತ ಮಾಡಬೇಕಾಗಬಹುದು. ಆಗ ಅಂಕಗಳ ಲೆಕ್ಕಾಚಾರಗಳು ಬದಲಾಗಬಹುದು. ಆದರೆ ಸಮಯ ಯಾವಾಗ ಎನ್ನುವುದು ದೊಡ್ಡ ತಲೆನೋವಾಗಲಿದೆ.