ಕಡಿಮೆ ರನ್ ರೇಟಿನ ಗುಜರಾತ್ ಲಯನ್ಸ್‌ಗೆ ಮುಂಬೈ ವಿರುದ್ಧ ಗೆಲುವಿನ ನಿರೀಕ್ಷೆ

ಶನಿವಾರ, 21 ಮೇ 2016 (12:44 IST)
ಗುಜರಾತ್ ಲಯನ್ಸ್ ಐಪಿಎಲ್ 2016ರ ಹೊಸ ತಂಡವಾಗಿದ್ದು, ಸುರೇಶ್ ರೈನಾ ನಾಯಕತ್ವ ವಹಿಸಿದ್ದಾರೆ. ನ್ಯೂಜಿಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಬ್ರೆಂಡನ್ ಮೆಕಲಮ್ ತಂಡದಲ್ಲಿರುವುದು ಅದಕ್ಕೆ ಆನೆಬಲ ತಂದುಕೊಟ್ಟಿದೆ. ಅವರಲ್ಲದೇ ಆರಾನ್ ಫಿಂಚ್, ಡ್ವೇನ್ ಬ್ರೇವೊ,  ದಿನೇಶ್ ಕಾರ್ತಿಕ್ ಡ್ವೇನ್ ಸ್ಮಿತ್ ಮುಂತಾದ ಉತ್ತಮ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ಪ್ರವೀಣ್ ಕುಮಾರ್ , ಜೇಮ್ಸ್ ಫಾಕ್ನರ್ ವೇಗದ ಬೌಲರುಗಳು.
 
 ಪಟ್ಟಿಯಲ್ಲಿ ಪ್ರಸಕ್ತ 2ನೇ ಸ್ಥಾನ, ಆಡಿದ ಪಂದ್ಯಗಳು 13, ಗಳಿಸಿದ ಪಾಯಿಂಟ್ 16
ಮುಂದಿನ ಪಂದ್ಯ- ಮುಂಬೈ ಇಂಡಿಯನ್ಸ್ ವಿರುದ್ಧ (ಮೇ 21 ಕಾನ್ಪುರ) 
 
ಸುರೇಶ್ ರೈನಾ ನಾಯಕತ್ವದ ಗುಜರಾತ್ ಲಯನ್ಸ್ ಅತೀ ಕಡಿಮೆ ರನ್ ರೇಟ್ -0.493 ಹೊಂದಿದ್ದು, ಡೆಲ್ಲಿ ಡೇರ್ ಡೆವಿಲ್ಸ್ ಗೆಲುವಿನೊಂದಿಗೆ ಅದರ ಮೇಲೆ ಒತ್ತಡ ಹೆಚ್ಚಿದೆ. ಸ್ವಯಂ ಅರ್ಹತೆ ಪಡೆಯಲು ಅದು ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲಲೇಬೇಕಾಗಿದೆ.  ಅವರು ಸೋತ ಪಕ್ಷದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡೆಲ್ಲಿ ಡೇರ್ ಡೇವಿಲ್ಸ್ ವಿರುದ್ಧ ಗೆದ್ದರೆ ಮತ್ತು   ಕೋಲ್ಕತಾ ನೈಟ್ ರೈಡರ್ಸ್ ಸನ್‌ರೈಸರ್ಸ್ ತಂಡದ ವಿರುದ್ಧ ಗೆದ್ದರೆ ಮಾತ್ರ  ಗುಜರಾತ್ ಲಯನ್ಸ್ ಪ್ಲೇ ಆಫ್ ಆಸೆ ಜೀವಂತವಾಗುಳಿಯಲಿದೆ.  ಕೆಕೆಆರ್ ಗೆದ್ದರೆ ಗುಜರಾತ್ ಲಯನ್ಸ್ ಹೊರಬೀಳುತ್ತದೆ. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

ವೆಬ್ದುನಿಯಾವನ್ನು ಓದಿ