ಐಪಿಎಲ್: ಫೇಸ್‌ಬುಕ್ ಹೇಗೆ ಟಿ20 ಕ್ರಿಕೆಟ್ ಉತ್ಸವ ಆಚರಿಸಿತು ?

ಮಂಗಳವಾರ, 26 ಮೇ 2015 (16:26 IST)
ಸಾಮಾಜಿಕ ಜಾಲ ತಾಣ ಫೇಸ್‌ಬುಕ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 8ನೇ ಆವೃತ್ತಿಯು ರಾಜಕೀಯ ಮತ್ತು ಬಾಲಿವುಡ್ಡನ್ನು ಅತೀ ಜನಪ್ರಿಯ ವಿಷಯಗಳ ಪಟ್ಟಿಯಲ್ಲಿ ಬಹುಹಿಂದಕ್ಕೆ ದೂಡಿ  ಮೇಲುಗೈ ಪಡೆಯಿತು. 
 
ಐಪಿಎಲ್ 8ಕ್ಕೆ ಸಂಬಂಧಿಸಿದ ಚರ್ಚೆಗಳಲ್ಲಿ ಫೇಸ್ ಬುಕ್ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮುಂಚೂಣಿಯಲ್ಲಿತ್ತು. ಐಪಿಎಲ್ 8ನೇ ಆವೃತ್ತಿಯು ಅಭಿಮಾನಿಗಳನ್ನು ಒಂದೂವರೆ ತಿಂಗಳ ಟಿವಿಸೆಟ್‌ಗಳ ಮುಂದೆ ಕೂರಿಸಿತು.

ಫೇಸ್ ಬುಕ್ ಬಹಿರಂಗ ಮಾಡಿದ ದತ್ತಾಂಶದ ಪ್ರಕಾರ, ಟಿ 20 ಪಂದ್ಯಾವಳಿಯು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಅನೇಕ ಮಂದಿ ತೊಡಗಿಸಿಕೊಳ್ಳಲು ಕಾರಣವಾಯಿತು. 29 ದಶಲಕ್ಷ ಜಾಗತಿಕ ಬಳಕೆದಾರರು ಏಪ್ರಿಲ್ 1ರಿಂದ ಮೇ 24ರ ನಡುವೆ 312 ದಶಲಕ್ಷ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. 
 
 ರೋಮಾಂಚಕ ಕ್ರಿಕೆಟ್ ಅನೇಕ ಮಂದಿ ಅಭಿಮಾನಿಗಳಲ್ಲಿ ನಾನಾ ಊಹಾಪೋಹಗಳನ್ನು ಹುಟ್ಟುಹಾಕಿದರೆ, ಸಾಮಾಜಿಕ ವೇದಿಕೆಗಳಲ್ಲಿ ಗೆಲುವು ಮತ್ತು ಸೋಲುಗಳನ್ನು ಚರ್ಚಿಸಲಾಯಿತು.  
 
* ಅತೀ ಹೆಚ್ಚು ಚರ್ಚಿತ ಆಟಗಾರರು:  ರೋಹಿತ್ ಶರ್ಮಾ ಮತ್ತು ಎಂ.ಎಸ್. ಧೋನಿ 
* ಪಂದ್ಯದ ಬಗ್ಗೆ ಮಾತನಾಡಿದ ಟಾಪ್  ರಾಜ್ಯಗಳು: ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ಉತ್ತರಪ್ರದೇಶ ಮತ್ತು ಕರ್ನಾಟಕ. 
ಚರ್ಚಿಸಿದ ಅಗ್ರ ಜನವರ್ಗ( 18ಕ್ಕಿಂತ ಮೇಲಿನ ವಯಸ್ಸಿನವರು) ಪುರುಷರು- 18ರಿಂದ 24, ಪುರುಷರು- 25ರಿಂದ 34 ಮಹಿಳೆಯರು-18ರಿಂದ 24 ಪುರುಷರು-35ರಿಂದ 44 ಮತ್ತು ಮಹಿಳೆಯರು - 25ರಿಂದ 34.
 
 ಫೇಸ್ ಬುಕ್ ಮತ್ತು ಟ್ವಿಟರ್ ಎರಡೂ ಐಪಿಎಲ್ ಚರ್ಚಿಸಲು ಅತೀ ದೊಡ್ಡ ವೇದಿಕೆಗಳಾಗಿ ಹೊರಹೊಮ್ಮಿದವು. ಇವು ರಾಜಕೀಯ ಮತ್ತು ಬಾಲಿವುಡ್ ಮುಂತಾದ ಇತರ ಜನಪ್ರಿಯ ವಿಷಯಗಳನ್ನು ಬದಿಗೊತ್ತಿದವು. ಲೈವ್ ಮೆಂಟ್ ವರದಿ ಪ್ರಕಾರ, ಫೇಸ್ ಬುಕ್ ರೀತಿಯಲ್ಲಿ ಟ್ವಿಟರ್ ಕೂಡ ಗಮನಾರ್ಹ ಸಂಖ್ಯೆಗಳನ್ನು ದಾಖಲಿಸಿದೆ.  ಏಪ್ರಿಲ್ 9 ಮತ್ತು ಮೇ 13ರ ನಡುವೆ 290.1 ದಶಲಕ್ಷ  ಟ್ವೀಟ್ ಸಂದೇಶಗಳು ಹರಿದಾಡಿವೆ. 

ವೆಬ್ದುನಿಯಾವನ್ನು ಓದಿ