ಅಭಿಮಾನಿಗಳಿಲ್ಲದೇ ಐಪಿಎಲ್ 13 ಕಳೆಗಟ್ಟೋದು ಹೇಗೆ?

ಗುರುವಾರ, 17 ಸೆಪ್ಟಂಬರ್ 2020 (09:21 IST)
ದುಬೈ: ಕೊರಾನಾ ಈ ಬಾರಿಯ ಐಪಿಎಲ್ ನ ಗದ್ದಲವನ್ನು ನುಂಗಿ ಹಾಕಿದೆ. ಐಪಿಎಲ್ 13 ನಲ್ಲಿ ಈ ಬಾರಿ ಆಟಗಾರರು ಖಾಲಿ ಮೈದಾನದಲ್ಲಿ ಆಡಲು ಮಾನಸಿಕವಾಗಿ ಸಿದ್ಧವಾಗಿದ್ದಾರೆ.


ಆಟಗಾರರಿಗೂ ಮೈದಾನದಲ್ಲಿ ಅಭಿಮಾನಿಗಳ ಸದ್ದು ಗದ್ದಲವಿಲ್ಲದೇ ಆಡೋದು ಸಪ್ಪೆ ಎನಿಸಲಿದೆ. ಹೀಗಾಗಿ ಕ್ರಿಕೆಟಿಗರನ್ನು ಹುರಿದುಂಬಿಸಲು ಹಿನ್ನಲೆ ಸಂಗೀತ ಕೇಳಿಸಬಹುದು. ಹಾಗಿದ್ದರೂ ಇದು ಆಟಗಾರರಿಗೆ ವಿಚಿತ್ರ ಅನುಭವ ಕಟ್ಟಿಕೊಡಲಿದೆ. ಆದರೆ ಪಾಕಿಸ್ತಾನ ಹೊರತುಪಡಿಸಿ ನೂರಾರು ದೇಶಗಳಲ್ಲಿ ಐಪಿಎಲ್ ನೇರಪ್ರಸಾರವಾಗಲಿದೆ. ಹೀಗಾಗಿ ಅಭಿಮಾನಿಗಳಿಗೆ ನೇರವಾಗಿ ನೋಡುವ ಮಜಾ ಇಲ್ಲದೇ ಹೋದರೂ ನೇರಪ್ರಸಾರ ವೀಕ್ಷಿಸಬಹುದು. ಹೀಗಾಗಿ ಐಪಿಎಲ್ ಗೆ ವೀಕ್ಷಕರ ಕೊರತೆಯಾಗದು. ಆದರೆ ಆಟಗಾರರಿಗೆ ವೀಕ್ಷಕರ ಅನುಪಸ್ಥಿತಿಯ ಕೊರತೆ ಎದ್ದು ಕಾಣಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ