ಐಪಿಎಲ್ 14: ಒಂದೇ ಒಂದು ಸಿಕ್ಸರ್ ಸಿಡಿಸದೇ ದಾಖಲೆ ಮಾಡಿದ ಡೆಲ್ಲಿ!
ಮಂಗಳವಾರ, 28 ಸೆಪ್ಟಂಬರ್ 2021 (17:40 IST)
ದುಬೈ: ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ನಡೆಯುತ್ತಿರುವ ಇಂದಿನ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೊಸ ದಾಖಲೆಯನ್ನು ಮಾಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿದೆ. ಈ ಇನಿಂಗ್ಸ್ ನಲ್ಲಿ ಡೆಲ್ಲಿಯ ಯಾವುದೇ ಬ್ಯಾಟ್ಸ್ ಮನ್ ಕೂಡಾ ಸಿಕ್ಸರ್ ಸಿಡಿಸಿಲ್ಲ.
ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಎರಡನೇ ಬಾರಿ ತಂಡವೊಂದು ಇನಿಂಗ್ಸ್ ಒಂದರಲ್ಲಿ ಒಂದೇ ಒಂದು ಸಿಕ್ಸರ್ ಇಲ್ಲದೇ ದಾಖಲೆ ಮಾಡಿದೆ. ಇದಕ್ಕೂ ಮೊದಲು ರಾಜಸ್ಥಾನ್ ರಾಯಲ್ಸ್ ಈ ದಾಖಲೆ ಮಾಡಿತ್ತು. ಇದು ಐಪಿಎಲ್ ನಲ್ಲಿ ವಿಶಿಷ್ಟ ದಾಖಲೆಯಾಗಿದೆ.