ಐಪಿಎಲ್ 14: ರಾಜಸ್ಥಾನ್ ರಾಯಲ್ಸ್-ಕೆಕೆಆರ್ ನಡುವೆ ಇಂದಿನ ಪಂದ್ಯ

ಶನಿವಾರ, 24 ಏಪ್ರಿಲ್ 2021 (09:32 IST)
ಮುಂಬೈ: ಐಪಿಎಲ್ 14 ರ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕೊತ್ತಾ ನೈಟ್ ರೈಡರ್ಸ್ ನಡುವೆ ಹಣಾಹಣಿ ನಡೆಯಲಿದೆ.


ಒಂದು ರೀತಿಯಲ್ಲಿ ಹೇಳುವುದಾದರೆ ಎರಡೂ ಒಂದೇ ದೋಣಿಯ ಪಯಣಿಗರು. ಎರಡೂ ತಂಗಳಿಂದ ಖ್ಯಾತಿಗೆ ತಕ್ಕ ಆಟ ಇನ್ನೂ ಬಂದಿಲ್ಲ. ಇದುವರೆಗೆ ಆಡಿ ನಾಲ್ಕು ಪಂದ್ಯಗಳಿಂದ ಎರಡೂ ತಂಡಕ್ಕೆ ಸಿಕ್ಕಿದ್ದು ಕೇವಲ ಒಂದು ಗೆಲುವು ಮಾತ್ರ.

ಸತತ ಸೋಲುಗಳಿಂದ ಕಂಗೆಟ್ಟಿದ್ದ ಕೆಕೆಆರ್ ಕಳೆದ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸ ಪಡೆದುಕೊಂಡಿದೆ. ಇತ್ತ ರಾಜಸ್ಥಾನ್ ಗೆ ಕಳೆದ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಹೀನಾಯ ಸೋಲಾಗಿದೆ. ಈ ಎರಡೂ ತಂಡಗಳ ನಡುವಿನ ಪಂದ್ಯದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂದು ಕಾದು ನೋಡಬೇಕಿದೆ. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ