ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ರೋಹಿತ್ ಶರ್ಮಾ ಮತ್ತೊಂದು ಭರ್ಜರಿ ಪರ್ಫಾರ್ಮೆನ್ಸ್ ನೀಡಿ 52 ಎಸೆತಗಳಲ್ಲಿ 63 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ 33 ರನ್ ಗಳಿಸಿದರು.
ಈ ಮೊತ್ತ ಬೆನ್ನತ್ತಿದ್ದ ಪಂಜಾಬ್ ಗೆ ನಾಯಕ ಕೆಎಲ್ ರಾಹುಲ್ 60 ರನ್ ಗಳಿಸಿ ಆಸರೆಯಾದರು. ಅಜೇಯ 43 ರನ್ ಗಳಿಸಿದ ಕ್ರಿಸ್ ಗೇಲ್ ತಕ್ಕ ಸಾಥ್ ನೀಡಿದರು. ಇದರೊಂದಿಗೆ ಪಂಜಾಬ್ 17.4 ಓವರ್ ಗಳಲ್ಲಿಯೇ 1 ವಿಕೆಟ್ ನಷ್ಟಕ್ಕೆ 132 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು.