ಐಪಿಎಲ್ 14: ಆರ್ ಸಿಬಿ ಪಂದ್ಯಕ್ಕೆ ಕೊರೋನಾ ಕಾರ್ಮೋಡ

ಮಂಗಳವಾರ, 4 ಮೇ 2021 (08:57 IST)
ಮುಂಬೈ: ಐಪಿಎಲ್ 14 ಗೂ ಈಗ ಕೊರೋನಾ ಭೀತಿ ಕಾಡಿದೆ. ನಿನ್ನೆ ನಡೆಯಬೇಕಾಗಿದ್ದ ಕೋಲ್ಕೊತ್ತಾ ನೈಡರ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯವನ್ನು ಕೊರೋನಾ ಕಾರಣಕ್ಕೆ ಮುಂದೂಡಲಾಗಿದೆ.


ಕೆಕೆಆರ್ ತಂಡದಲ್ಲಿ ಇಬ್ಬರು ಆಟಗಾರರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಆರ್ ಸಿಬಿ-ಕೆಕೆಆರ್ ಪಂದ್ಯವನ್ನೇ ಮುಂದೂಡಲಾಗಿದೆ. ಈ ರೀತಿ ಆಗುತ್ತಿರುವುದು ಇದೇ ಮೊದಲು.

ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇವರ ಜೊತೆಗಿದ್ದ ಪ್ಯಾಟ್ ಕ್ಯುಮಿನ್ಸ್ ಗೆ ಸೋಂಕು ತಗುಲಿಲ್ಲ. ಹಾಗಿದ್ದರೂ ಮುನ್ನೆಚ್ಚರಿಕೆಯ ದೃಷ್ಟಿಯಿಂದ ನಿನ್ನೆಯ ಪಂದ್ಯವನ್ನು ಮುಂದೂಡಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ