ಕೆಎಲ್ ರಾಹುಲ್ ಆಸ್ಪತ್ರೆಗೆ ದಾಖಲು: ಐಪಿಎಲ್ ನಿಂದ ಹೊರಕ್ಕೆ ಸಾಧ್ಯತೆ
ಮೊನ್ನೆ ರಾತ್ರಿ ಕೆಳ ಹೊಟ್ಟೆನೋವಿನಿಂದ ಬಳಲಿದ ರಾಹುಲ್ ರನ್ನು ಬ್ರೀಚ್ ಕ್ಯಾಂಡೀ ಆಸ್ಪತ್ರೆಗೆ ದಾಖಲಿಸಲಾಯಿತು. ಪರೀಕ್ಷೆ ನಡೆಸಿದ ಬಳಿಕ ಅವರಿಗೆ ಅಪೆಂಡಿಸೈಟಿಸ್ ಇರುವುದು ಪತ್ತೆಯಾಗಿದೆ. ಹೀಗಾಗಿ ಇದನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಬೇಕಾಗುತ್ತದೆ. ಇದರಿಂದಾಗಿ ರಾಹುಲ್ ಐಪಿಎಲ್ 14 ರಿಂದಲೇ ಹೊರಬಿದ್ದರೂ ಅಚ್ಚರಿಯಿಲ್ಲ.