ಮುಂಬೈ: ಐಪಿಎಲ್ 14 ರ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ದೇಶದ ಆರು ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಆದರೆ ತವರಿನ ಅಂಕಣದಲ್ಲಿ ಆಡುವ ಯೋಗ ಯಾವುದೇ ತಂಡಕ್ಕೆ ಇಲ್ಲ.
ಬೆಂಗಳೂರಿನಲ್ಲಿ ಒಟ್ಟು 10 ಪಂದ್ಯಗಳಿವೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಲ್ಲಿನ ಮೈದಾನದಲ್ಲಿ ಆಡುತ್ತಿಲ್ಲ. ಅದೇ ರೀತಿ ಮುಂಬೈ, ದೆಹಲಿ, ಚೆನ್ನೈ ತಂಡಗಳಿಗೂ ತವರಿನ ಪ್ರೇಕ್ಷಕರ ಎದುರು ಆಡುವ ಯೋಗವಿಲ್ಲ.
ಈ ಬಾರಿ ಒಟ್ಟು ಆರು ನಗರಗಳಲ್ಲಿ ಪಂದ್ಯಗಳು ನಡೆಯಲಿದ್ದು, ಅವುಗಳ ಪೈಕಿ ಯಾವ ತಂಡಗಳಿಗೂ ತಮ್ಮ ತವರು ಪ್ರೇಕ್ಷಕರ ಎದುರು ಆಡುವ ರೀತಿ ವೇಳಾಪಟ್ಟಿ ನಿಯೋಜಿಸಲಾಗಿಲ್ಲ. ಇಡೀ ಕೂಟದಲ್ಲಿ ಒಟ್ಟು ಮೂರು ಬಾರಿ ಮಾತ್ರ ತಂಡಗಳು ಬೇರೆ ಊರಿಗೆ ಪ್ರಯಾಣ ಬೆಳೆಸಲಿವೆ.
ಈ ಬಾರಿ ಲೀಗ್ ಹಂತದ ಪಂದ್ಯಗಳಲ್ಲಿ ಪ್ರೇಕ್ಷಕರಿಗೆ ಮೈದಾನಕ್ಕೆ ಬರಲು ಅವಕಾಶವಿಲ್ಲ. ಹೀಗಾಗಿ ತಂಡಗಳೂ ಸಮಾಧಾನ ಹೊಂದಬಹುದು. ಹಾಗಿದ್ದರೂ ತವರಿನ ಅಂಕಣದ ಲಾಭವೆತ್ತಲು ಯಾವುದೇ ತಂಡಕ್ಕೂ ಅವಕಾಶ ಸಿಗದು.