ಫಾರಂನಲ್ಲಿರುವುಕ್ಕೆ ಅಜಿಂಕ್ಯಾ ರಹಾನೆಗೆ ತೃಪ್ತಿ, ಹೂಡಾಗೆ ಶ್ಲಾಘನೆ

ಸೋಮವಾರ, 13 ಏಪ್ರಿಲ್ 2015 (14:51 IST)
ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಪರ ಅಜಿಂಕ್ಯಾ ರಹಾನೆ 47 ರನ್ ಮೂಲಕ ಇನ್ನಿಂಗ್ಸ್‌ಗೆ ಭದ್ರ ಅಡಿಪಾಯ ಹಾಕಿದರು. ಡೆಲ್ಲಿ ಹಾಕಿದ ಸವಾಲನ್ನು ಮೆಟ್ಟಿ ನಿಂತ ರಾಯಲ್ಸ್ ಅದರ ಗುರಿಯನ್ನು ಮುಟ್ಟುವಲ್ಲಿ ಯಶಸ್ವಿಯಾಯಿತು. 39 ಎಸೆತಗಳಲ್ಲಿ ರಹಾನೆಯ 47 ರನ್‌ನಲ್ಲಿ ಮೂರು ಸಿಕ್ಸರ್‌ಗಳು ಮತ್ತು ಎರಡು ಬೌಂಡರಿಗಳಿದ್ದವು.  ಟೀಂ ಇಂಡಿಯಾ ಜೊತೆ ತಮ್ಮ ಯಶಸ್ಸು ಆತ್ಮವಿಶ್ವಾಸ ಹೆಚ್ಚಿಸಲು ನೆರವಾಯಿತು. ಕಳೆದೆರಡು ವರ್ಷಗಳಲ್ಲಿ ನಾನು ಆಡಿದ ರೀತಿಯಿಂದ ನನ್ನ ಆತ್ಮವಿಶ್ವಾಸ ಹೆಚ್ಚಿತು ಎಂದು ರಹಾನೆ ಹೇಳಿದರು. 
 
 ನಿಮ್ಮ ಆತ್ಮವಿಶ್ವಾಸ ಹೆಚ್ಚಿದ್ದಾಗ ನೀವು ಖಂಡಿತವಾಗಿ ಮೇಲುಗೈ ಸಾಧಿಸುತ್ತೀರಿ. ಸದ್ಯಕ್ಕೆ ನನ್ನ ಆತ್ಮವಿಶ್ವಾಸ ಹೆಚ್ಚಿದೆ ಎಂದು ಹೇಳಿದರು.  ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಅಮಿತ್ ಮಿಶ್ರಾ ಮತ್ತು ಇಮ್ರಾನ್ ತಾಹಿರ್ ವಿರುದ್ಧ ನಿಮ್ಮ ಗೇಮ್ ಪ್ಲಾನ್ ಏನಿತ್ತು ಎಂದು ಪ್ರಶ್ನಿಸಿದಾಗ, ಇಬ್ಬರು ಲೆಗ್ ಸ್ಪಿನ್ನರ್‌ಗಳನ್ನು ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಎದುರಿಸುವುದು ಅಷ್ಟು ಸುಲಭವಲ್ಲ ಎಂದರು. 
 
ಒಳ್ಳೆಯ ಎಸೆತ ಬೌಲ್ ಮಾಡಿದಾಗ ಅದಕ್ಕೆ ಮರ್ಯಾದೆ ನೀಡಬೇಕು. ನೀವು ಮರ್ಯಾದೆಯಿಂದ ಆಡಿದರೆ ಬೌಂಡರಿ ದಕ್ಕಿ ಅಗತ್ಯ ರನ್‌ಗಳು ಬರುತ್ತವೆ ಎಂದು ರಹಾನೆ ಹೇಳಿದರು. ದೀಪಕ್ ಹೂಡಾ ಪ್ರದರ್ಶನವನ್ನು ಅವರು ಶ್ಲಾಘಿಸಿದರು. ದೀಪಕ್ ಹೂಡಾ ಅವರು 25 ಎಸೆತಗಳಲ್ಲಿ ಬಿರುಸಿನ 54 ರನ್ ಹೊಡೆದು ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಪಾತ್ರರಾಗಿದ್ದರು. 

ವೆಬ್ದುನಿಯಾವನ್ನು ಓದಿ