ಅಸಾಧಾರಣವೆಂದು ತೋರಿಸಿದ ಮಂದೀಪ್: ವಿರಾಟ್ ಕೊಹ್ಲಿ

ಗುರುವಾರ, 21 ಮೇ 2015 (10:00 IST)
ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ನಾಯಕ ವಿರಾಟ್ ಕೊಹ್ಲಿ ಬುಧವಾರ ತಮ್ಮ ತಂಡದ ಸಹಆಟಗಾರ ಮಂದೀಪ್ ಸಿಂಗ್ ಬ್ಯಾಟಿಂಗ್ ಶೈಲಿಯನ್ನು ಶ್ಲಾಘಿಸಿದರು. ಕಿಂಗ್ಸ್ ಇಲೆವ್ ತಂಡದಿಂದ ತಮ್ಮನ್ನು ಖರೀದಿಸಿದ ತಂಡದ ನಿರ್ಧಾರಕ್ಕೆ ಅವರು ಸಮರ್ಥನೆ ನೀಡಿದ್ದಾರೆಂದು ಕೊಹ್ಲಿ ಹೇಳಿದರು. 
 
 ಮಂದೀಪ್ ತಮ್ಮ  ಸ್ಫೋಟಕ ಸ್ಕೋರ್ ಮೂಲಕ ರಾಜಸ್ಥಾನ ರಾಯಲ್ಸ್ ತಂಡವನ್ನು 71 ರನ್‌ಗಳಿಂದ ಸೋಲಿಸುವುದಕ್ಕೆ ತಮ್ಮ ತಂಡಕ್ಕೆ ನೆರವಾದರು. ಒಂದು ಹಂತದಲ್ಲಿ 2 ವಿಕೆಟ್ ಕಳೆದುಕೊಂಡು 46 ರನ್ ಗಳಿಸಿದ್ದ ಬೆಂಗಳೂರು ತಂಡದ ಪರ ಮಂದೀಪ್ ಮತ್ತು ಡಿ ವಿಲಿಯರ್ಸ್ 113 ರನ್ ಜೊತೆಯಾಟವಾಡಿ ತಮ್ಮ ತಂಡ 180 ರನ್ ಮೊತ್ತವನ್ನು ಕಲೆಹಾಕಲು ನೆರವಾದರು. ಮಂದೀಪ್ 34 ಎಸೆತಗಳಿಗೆ ಅಜೇಯ 54 ರನ್ ಬಾರಿಸಿದರು. 
 
 ರಾಯಲ್ಸ್ ರನ್ ಚೇಸ್ ಮಾಡುವಾಗ ಎಡವಿ 19 ಓವರುಗಳಲ್ಲಿ 109 ರನ್‌ಗೆ ಆಲೌಟ್ ಆಗಿದೆ. ಡಿ ವಿಲಿಯರ್ಸ್ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಎನ್ನುವುದು ನಮಗೆ ಗೊತ್ತಿದೆ. ಆದರೆ ಆ ಯುವಕ ತಾನು ಎಷ್ಟು ವಿಶೇಷ ಎನ್ನುವುದನ್ನು ತೋರಿಸಿದ್ದಾನೆ ಎಂದು ಪಂದ್ಯದ ನಂತರದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಹೇಳಿದರು. 
 
2013ರಲ್ಲಿ ನಾವು ಕ್ವಾಲಿಫೈ ಆಗಿಲ್ಲದಿರುವುದು ನೋವು ಉಂಟು ಮಾಡಿತು. ಆದರೆ ಈ ವರ್ಷ ನಾವು ಹಿಂದಿನ ಆವೃತ್ತಿಗಳಿಗಿಂತ ಉತ್ತಮ ಕ್ರಿಕೆಟ್ ಆಡಿದ್ದೇವೆ. ನಾವು ನಿರ್ಣಾಯಕ ಪಂದ್ಯಗಳಲ್ಲಿ ಜಯಗಳಿಸಿದ್ದೇವೆ ಎಂದು ಕೊಹ್ಲಿ ಹೇಳಿದ್ದಾರೆ. ಪಂದ್ಯಾವಳಿಯ ಕೊನೆಯ ಎರಡು ಪಂದ್ಯಗಳನ್ನು ಆಡಲು ನಾವು ನಿರೀಕ್ಷಿಸಿದ್ದೇವೆ. ಶುಕ್ರವಾರ ಎರಡನೇ ಕ್ವಾಲಿಫೈಯರ‌್‌ನಲ್ಲಿ ಚೆನ್ನೈಯನ್ನು ಸೋಲಿಸಿ ಫೈನಲ್ ಪ್ರವೇಶಿಸಲು ಸಜ್ಜಾಗಿದ್ದೇವೆ ಎಂದು ಕೊಹ್ಲಿ ಹೇಳಿದರು. 
 

ವೆಬ್ದುನಿಯಾವನ್ನು ಓದಿ