ಐಪಿಎಲ್ 2022: ರಾಜಸ್ಥಾನ್ ರಾಯಲ್ಸ್ ಹಣೆಬರಹ ಬರೆಯಲಿರುವ ಸಿಎಸ್ ಕೆ

ಶುಕ್ರವಾರ, 20 ಮೇ 2022 (09:00 IST)
ಮುಂಬೈ: ಐಪಿಎಲ್ 2022 ರಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮಹತ್ವದ ಹಣಾಹಣಿ ನಡೆಯಲಿದೆ.

ಕಳೆದ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರೊಳಗೆ ಸ್ಥಾನ ಪಡೆದಿರುವ ರಾಜಸ್ಥಾನ್ ರಾಯಲ್ಸ್ ಗೆ ಈಗ ಒಂದೇ ಒಂದು ಪಂದ್ಯ ಸೋತರೂ ಪ್ಲೇ ಆಫ್ ಹಂತಕ್ಕೆ ಪೈಪೋಟಿ ಎದುರಾಗಲಿದೆ. ಹೀಗಾಗಿ ಇಂದಿನ ಪಂದ್ಯ ಗೆಲ್ಲುವುದು ಮುಖ್ಯವಾಗಲಿದೆ.

ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಾಗಲೇ ಪ್ಲೇ ಆಫ್ ಹಂತದಿಂದ ಹೊರಬಿದ್ದಿದೆ. ಹೀಗಾಗಿ ಈ ಪಂದ್ಯ ಧೋನಿ ಪಡೆಗೆ ಔಪಚಾರಿಕವಷ್ಟೇ. ಹಾಗಿದ್ದರೂ ಇಂದು ಗೆದ್ದರೆ ರಾಜಸ್ಥಾನ್ ಪ್ಲೇ ಆಫ್ ಹಾದಿಗೆ ಮುಳ್ಳಾಗಬಹುದು. ಈ ಪಂದ್ಯ ಸಂಜೆ 7.30 ಕ್ಕೆ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ