ಐಪಿಎಲ್ 2022: ಸೋಲಿನ ಹತಾಶೆಯಲ್ಲಿರುವ ಮುಂಬೈ-ಚೆನ್ನೈ ಇಂದು ಮುಖಾಮುಖಿ

ಗುರುವಾರ, 21 ಏಪ್ರಿಲ್ 2022 (07:30 IST)
ಮುಂಬೈ: ಐಪಿಎಲ್ 2022 ರಲ್ಲಿ ಇಂದು ಸೋಲಿನ ಹತಾಶೆಯಲ್ಲಿರುವ ಎರಡು ಚಾಂಪಿಯನ್ ತಂಡಗಳಾದ ಚೆನ್ನೈ ಮತ್ತು ಮುಂಬೈ ಪರಸ್ಪರ ಸೆಣಸಲಿವೆ.

ಮುಂಬೈ ಇಂಡಿಯನ್ಸ್  ಈ ಕೂಟದಲ್ಲಿ ಒಂದೇ ಒಂದು ಗೆಲುವು ಕಂಡಿಲ್ಲ. ಆಡಿದ ಆರೂ ಪಂದ್ಯಗಳನ್ನು ಸೋತು ರೋಹಿತ್ ಪಡೆ ಮಾನಸಿಕವಾಗಿ ಕುಗ್ಗಿ ಹೋಗಿದೆ.

ಇತ್ತ ರವೀಂದ್ರ ಜಡೇಜಾ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದುವರೆಗೆ ಕಂಡಿದ್ದು ಏಕೈಕ ಗೆಲುವು. ವಿಪರ್ಯಾಸವೆಂದರೆ ಎರಡೂ ತಂಡಗಳು ಇದುವರೆಗೆ ಐಪಿಎಲ್ ನಲ್ಲಿ ಚಾಂಪಿಯನ್ ಗಳಾಗಿ ಮೆರೆಯುತ್ತಿದ್ದವರು. ಇದೀಗ ಎರಡೂ ತಂಡಗಳ ದುಃಖ ಸಮಾನವಾಗಿದೆ. ಹೀಗಾಗಿ ಇಂದಿನ ಹೋರಾಟದಲ್ಲಿ ಪೈಪೋಟಿ ನಿರೀಕ್ಷಿಸಬಹುದು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ