ಐಪಿಎಲ್ 2022: ಸಿಡಿದ ಪಾಟೀದಾರ್, ಕ್ವಾಲಿಫೈಯರ್ ಗೆ ಬೆಂಗಳೂರು
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು. ಅಗತ್ಯ ಸಂದರ್ಭದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ರಜತ್ ಪಾಟೀದಾರ್ ಕೇವಲ 54 ಎಸೆತಗಳಲ್ಲಿ 7 ಸಿಕ್ಸರ್ ಗಳೊಂದಿಗೆ 112 ರನ್ ಚಚ್ಚಿದರು. ತಕ್ಕ ಸಾಥ್ ನೀಡಿದ ವಿರಾಟ್ ಕೊಹ್ಲಿ 25, ದಿನೇಶ್ ಕಾರ್ತಿಕ್ 37 ರನ್ ಗಳಿಸಿದರು.
ಈ ಮೊತ್ತ ಬೆನ್ನತ್ತಿದ ಲಕ್ನೋ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊನೆಯ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ಹರ್ಷಲ್ ಪಟೇಲ್ ಗಾಯಗೊಂಡಿದ್ದರೂ ರನ್ ನಿಯಂತ್ರಿಸುವುದರ ಜೊತೆಗೆ ವಿಕೆಟ್ ಕಿತ್ತು ತಂಡದ ಗೆಲುವು ಸುಲಭಗೊಳಿಸಿದರು. ಜೋಶ್ ಹೇಝಲ್ ವುಡ್ 3 ವಿಕೆಟ್ ಕಬಳಿಸಿದರು. ಲಕ್ನೋ ಪರ ಕೆಎಲ್ ರಾಹುಲ್ 79, ದೀಪಕ್ ಹೂಡಾ 45 ರನ್ ಗಳಿಸಿದರು. ಇದೀಗ ಎರಡನೇ ಕ್ವಾಲಿಫೈಯರ್ ನಲ್ಲಿ ಆರ್ ಸಿಬಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಾಡಲಿದೆ. ಈ ಪಂದ್ಯದಲ್ಲಿ ಗೆದ್ದರೆ ಫೈನಲ್ ಗೇರಲಿದೆ.