ಐಪಿಎಲ್ 8: 10 ಸಾವಿರ ಕೋಟಿ ಬೆಟ್ಟಿಂಗ್ ನಡೆಸಿದ್ದ ತಂಡದ ಮೇಲೆ ಜಾರಿ ನಿರ್ದೇಶನಾಲಯ ದಾಳಿ

ಶುಕ್ರವಾರ, 22 ಮೇ 2015 (18:31 IST)
ಜಾರಿ ನಿರ್ದೇಶನಾಲಯ ಶುಕ್ರವಾರ ಐಪಿಎಲ್ ಪಂದ್ಯಗಳಲ್ಲಿ ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ಮುಂಬೈ, ದೆಹಲಿ, ಜೈಪುರ ಮತ್ತಿತರ ಕಡೆಗಳಲ್ಲಿ ದಾಳಿ ಮಾಡಿದೆ. ಇದಕ್ಕೆ ಮುಂಚೆ ಬಂಧಿಸಿದ ಅಧಿಕಾರಿಗಳ ನೆರವಿನಿಂದ ಇಡೀ ಹಗರಣದಲ್ಲಿ  ಭಾಗಿಯಾದ ಬೆಟ್ಟಿಂಗ್ ಸಿಂಡಿಕೇಟ್ ಜಾಡನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುವುದಾಗಿ ಇಡಿ ಮೂಲಗಳು ಹೇಳಿವೆ.
 
 ಈ ಜಾಲದಲ್ಲಿ ಕೆಲವು ಆಟಗಾರರನ್ನು ಸಿಕ್ಕಿಸುವ ಪ್ರಯತ್ನ ನಡೆಸಲಾಗುತ್ತಿದೆಯೆಂದು ನಿರೀಕ್ಷಿಸಿದ್ದ ಇಡಿ ಮುಂಬೈನಲ್ಲಿ ಅನಿಲ್ ಸಿಂಘಾನಿಯಾ ಎಂಬವನ ಮನೆಯ ಮೇಲೆ ದಾಳಿ ಮಾಡಿದಾಗ ದುಬೈ ಮತ್ತು ಪಾಕಿಸ್ತಾನದಲ್ಲಿ ಕೂಡ ಬೆಟ್ಟಿಂಗ್ ಜಾಲ ಬೇರುಗಳನ್ನು ಹೊಂದಿರುವ ಸಾಕ್ಷ್ಯಗಳು ಸಿಕ್ಕಿವೆ. 
 
 ಹವಾಲ ಜಾಲ ಮತ್ತು ಐಪಿಎಲ್ ಬೆಟ್ಟಿಂಗ್ ಸಿಂಡಿಕೇಟ್ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಿದ ಇಡಿ ಅಹ್ಮದಾಬಾದ್, ಗುಜರಾತ್‌ಗೆ ಹೆಚ್ಚಿನ ತನಿಖೆಗಾಗಿ ಕರೆದೊಯ್ದಿದೆ.  ಈ ಐಪಿಎಲ್ ಆವೃತ್ತಿಯಲ್ಲಿ ಕೂಡ ಅನೇಕ ಪಂದ್ಯಗಳನ್ನು ಫಿಕ್ಸ್ ಮಾಡಿರಬಹುದೆಂದು ಇಡಿ ಅಧಿಕಾರಿಗಳು ನಂಬಿದ್ದಾರೆ. ಐಪಿಎಲ್ ಪ್ರಸಕ್ತ ಆವೃತ್ತಿಯ ಪ್ರತಿ ಪಂದ್ಯದಲ್ಲಿ 600ರಿಂದ 800 ಕೋಟಿ ರೂ. ಬೆಟ್ಟಿಂಗ್ ನಡೆಯುತ್ತಿರುವ ಬಗ್ಗೆ ಇಡಿ ಮೂಲಗಳು ಸುಳಿವು ನೀಡಿವೆ. 

ವೆಬ್ದುನಿಯಾವನ್ನು ಓದಿ