ರಾಜಸ್ಥಾನ್ ರಾಯಲ್ಸ್‌ನ ಪ್ರವೀಣ್ ತಾಂಬೆ ಯಶಸ್ಸಿಗೆ ವಯಸ್ಸು ಅಡ್ಡಿಬಂದಿಲ್ಲ

ಶುಕ್ರವಾರ, 17 ಏಪ್ರಿಲ್ 2015 (12:18 IST)
42 ವರ್ಷಗಳ ವಯಸ್ಸಿನಲ್ಲಿ ಕ್ಲಬ್ ಕ್ರಿಕೆಟ್ ಮಟ್ಟದಿಂದ ಐಪಿಎಲ್‌ನಲ್ಲಿ ಆಡಲು ತೊಡಗಿದ ನಂತರ ಪ್ರಥಮ ದರ್ಜೆಗೆ ಚೊಚ್ಚಲ ಪ್ರವೇಶ ಮಾಡಿದ ಲೆಗ್‌ಸ್ಪಿನ್ನರ್ ಪ್ರವೀಣ್ ತಾಂಬೆ ಈ ಸಾರಿಯ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಅಜೇಯ ಅಭಿಯಾನಕ್ಕೆ ಸ್ಫೂರ್ತಿಯಾಗಿದ್ದಾರೆ.
 
 41ರ ವಯಸ್ಸಿನಲ್ಲಿ 2013ಕ್ಕೆ ಐಪಿಎಲ್ ಚೊಚ್ಚಲ ಪ್ರವೇಶ ಮಾಡಿದ ನಂತರ ಅದೇ ವರ್ಷದ ಕೊನೆಯಲ್ಲಿ  ಮುಂಬೈನ  ಪ್ರಥಮ ದರ್ಜೆ ಕ್ರಿಕೆಟ್‌‍ಗೆ ಪಾದಾರ್ಪಣೆ ಮಾಡಿದ ತಾಂಬೆ ಐಪಿಎಲ್ ಅತೀ ದೊಡ್ಡ ಯಶಸ್ಸಿನ ಕಥೆಗಳಲ್ಲಿ ಒಬ್ಬರಾಗಿದ್ದಾರೆ.
 
 ಐಪಿಎಲ್ ಚೊಚ್ಚಲ ಪಂದ್ಯದಲ್ಲಿ ಆಡುವತನಕ ಒಂದೇ ಒಂದು ಸ್ಪರ್ಧಾತ್ಮಕ ಪಂದ್ಯದಲ್ಲಿ ಆಡಿರದ ತಾಂಬೆ ಅವರನ್ನು ರಾಜಸ್ಥಾನ ತಂಡಕ್ಕೆ ಸೇರಿಸಿಕೊಂಡಾಗಿನಿಂದ ಅವರ ವೃತ್ತಿಜೀವನದ ಗ್ರಾಫ್ ಮೇಲೇರುತ್ತಿದೆ. ಗುರುವಾರ ಕೂಡ ತಾಂಬೆ ಕೇವಲ 2 ರನ್ ನೀಡಿ 2 ವಿಕೆಟ್ ಕಬಳಿಸುವ ಮೂಲಕ ಸನ್ ರೈಸರ್ಸ್ ತಂಡವನ್ನು  127 ರನ್‌ಗೆ ಮೊಟಕುಗೊಳಿಸಿದ್ದರು. 
 
ತಾಂಬೆ 15ನೇ ಓವರಿನಲ್ಲಿ ನಮನ್ ಓಝಾ ಅವರನ್ನು ಔಟ್ ಮಾಡಿದರು. ನಂತರ ಮುಂದಿನ ಓವರಿನಲ್ಲಿ ಮೋರ್ಗಾನ್ ಅವರನ್ನು ಎಲ್‌ಬಿ ಬಲೆಗೆ ಕೆಡವಿದರು. 
 ತಾಂಬೆ ತಮ್ಮ  ಸಂಕ್ಷಿಪ್ತ ಕ್ರಿಕೆಟ್ ಜೀವನದಲ್ಲಿ ಎರಡು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಅದರಿಂದ ತಮಗೆ ವಿಷಾದವೇನೂ ಇಲ್ಲ ಎಂದಿದ್ದಾರೆ. ಪ್ರಥಮ ದರ್ಜೆ ಪಂದ್ಯಗಳನ್ನು ಕಡಿಮೆ ಆಡಿರುವ ಬಗ್ಗೆ ತಮಗೆ ವಿಷಾದವಿಲ್ಲ.  ನಾನು ಮೊ ದಲಿಗೆ ಬೌಲಿಂಗ್ ಮಾಡಿದಾಗ ಇದ್ದ ತೀಕ್ಷ್ಣತೆಯನ್ನು ಈಗಲೂ ಕಾಯ್ದುಕೊಂಡಿದ್ದೇನೆ. ನಾನು ಕಳೆದುಹೋದ ಅವಕಾಶಗಳಿಗೆ ಚಿಂತಿಸುವುದಿಲ್ಲ. ನಾನು ಆಟವನ್ನು ಮನಸಾರೆ ಆನಂದಿಸುವ ಹಂತದಲ್ಲಿದ್ದು, ಚೆಂಡು ನನ್ನ ಕೈಯಲ್ಲಿ ಇರುವ ತನಕ ಆಟವನ್ನು ಆನಂದಿಸುತ್ತೇನೆ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ