ನವದೆಹಲಿ: ಐಪಿಎಲ್ ನ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ಮಾಲಿಕರಾದ ಶಾರುಖ್ ಖಾನ್ ಮತ್ತು ಜೂಹಿ ಚಾವ್ಲಾಗೆ ಜಾರಿ ನಿರ್ದೇಶನಾಲಯ ನೋಟೀಸು ಜಾರಿ ಮಾಡಿದೆ.
ಕಡಿಮೆ ಬೆಲೆಗೆ ಐಪಿಎಲ್ ತಂಡದ ಶೇರು ಮಾರಾಟ ಮಾಡಿದ್ದರಿಂದ ವಿದೇಶಿ ವಿನಿಮಯ ವ್ಯವಹಾರದಲ್ಲಿ 76.3 ಕೋಟಿ ರೂ. ನಷ್ಟವಾಗಿತ್ತು. ಈ ಹಿನ್ನಲೆಯಲ್ಲಿ ಕೋಲ್ಕೊತ್ತಾ ತಂಡದ ಮಾಲಿಕರಾಗಿರುವ ಇಬ್ಬರಿಗೂ ನೋಟೀಸ್ ಜಾರಿ ಮಾಡಲಾಗಿದೆ.
ಈ ಪ್ರಕರಣ 2009 ರಲ್ಲಿ ದಾಖಲಾಗಿತ್ತು. ಅದರ ನಂತರ ಹಲವು ಬಾರಿ ಇಬ್ಬರನ್ನೂ ವಿಚಾರಣೆಗೊಳಪಡಿಸಲಾಗಿತ್ತು. ತನಿಖೆ ಪೂರ್ಣಗೊಂಡ ನಂತರ ವಿದೇಶಿ ವಿನಿಮಯ ವ್ಯವಹಾರ ನಿಯಮದಡಿಯಲ್ಲಿ ಶೋಕಾಸ್ ನೋಟೀಸ್ ಜಾರಿ ಮಾಡಲಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ