ಈ ಬಾರಿ ಐಪಿಎಲ್ ನಲ್ಲಿ ಭಾನುವಾರವಷ್ಟೇ ಎರಡು ಪಂದ್ಯ

ಸೋಮವಾರ, 17 ಫೆಬ್ರವರಿ 2020 (09:18 IST)
ಮುಂಬೈ: ಈ ಬಾರಿಯ ಐಪಿಎಲ್ ನ ಅಂತಿಮ ವೇಳಾಪಟ್ಟಿಯನ್ನು ಬಿಸಿಸಿಐ ಅಂತಿಮಗೊಳಿಸಿದ್ದು, ಭಾನುವಾರಗಳಂದು ಮಾತ್ರ ಎರಡು ಪಂದ್ಯ ನಡೆಸಲು ತೀರ್ಮಾನಿಸಿದೆ.


ಮಾರ್ಚ್ 29 ರಿಂದ ಕೂಟ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡ ಸೆಣಸಾಡಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಪಂದ್ಯವನ್ನು ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧಧ ಮಾರ್ಚ್ 31 ರಂದು ಆಡಲಿದೆ.

ಒಟ್ಟು 50 ದಿನಗಳ ಕಾಲ ಪಂದ್ಯಾವಳಿ ನಡೆಯಲಿದೆ. ಕಳೆದ ಬಾರಿಗಿಂತ ಹೆಚ್ಚುವರಿ ಒಂದು ವಾರ ಕಾಲ ಪಂದ್ಯಾವಳಿ ನಡೆತಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ