ಬೃಹತ್ ಮೊತ್ತ ಬೆನ್ನಟ್ಟಿ ಗೆದ್ದ ಪಂಜಾಬ್: ನಾಯಕ ಜಾರ್ಜ್ ಬೈಲಿಗೆ ಸಂತಸ

ಸೋಮವಾರ, 21 ಏಪ್ರಿಲ್ 2014 (14:40 IST)
ನವದೆಹಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಜಾರ್ಜ್ ಬೈಲಿ ಖುಷಿಯಾಗಿದ್ದಾರೆ. ವಿಶ್ವ ಟ್ವೆಂಟಿ 20ಯಲ್ಲಿ ನೀರಸ ಪ್ರದರ್ಶನದ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್‌ ಎರಡು ಪಂದ್ಯಗಳಲ್ಲಿ ಬೃಹತ್ ಮೊತ್ತವನ್ನು ಬೆನ್ನಟ್ಟಿ ಗುರಿಮುಟ್ಟಿದ್ದರಿಂದ ಸಂತೋಷದಲ್ಲಿದ್ದಾರೆ. ಭಾನುವಾರ ಡೇವಿಡ್ ಮಿಲ್ಲರ್ ಮತ್ತು ಮ್ಯಾಕ್ಸ್‌ವೆಲ್ ಚೆನ್ನೈ ವಿರುದ್ಧ ತಮ್ಮ ಆಕ್ರಮಣಕಾರಿ ಆಟವನ್ನು ಪಂಜಾಬ್ ವಿರುದ್ಧ ಕೂಡ ಮುನ್ನಡೆಸಿದರು.

ಮಿಲ್ಲರ್ ಮತ್ತು ಮ್ಯಾಕ್ಸ್‌ವೆಲ್ ಪ್ರಯತ್ನಗಳಿಂದ ಆತ್ಮವಿಶ್ವಾಸ ಹೆಚ್ಚಿದೆ ಎಂದು ಬೈಲಿ ಹೇಳಿದ್ದಾರೆ.ಆದರೆ ನಮ್ಮ ಬೌಲಿಂಗ್ ಗುಣಮಟ್ಟವನ್ನು ಮೊನಚುಗೊಳಿಸಬೇಕಿದೆ. ಎರಡೂ ಪಂದ್ಯಗಳಲ್ಲಿ ಪಂಜಾಬ್ ಸಿಎಸ್‌ಕೆ ವಿರುದ್ಧ 205 ಮತ್ತು ರಾಜಸ್ಥಾನ ವಿರುದ್ಧ 191 ರನ್ ಬೆನ್ನಟ್ಟಿ ಗುರಿಮುಟ್ಟಿತು.

ನಾವು ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಸುಧಾರಿಸಿಕೊಂಡರೆ, ಇಂತಹ ಸ್ಕೋರ್ ಚೇಸ್ ಮಾಡುವ ಪರಿಸ್ಥಿತಿ ಬರುವುದಿಲ್ಲ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ