ಐಪಿಎಲ್ 2022: ಸಿಎಸ್ ಕೆ ಎದುರು ಪಂಜಾಬ್ ಗೆ ರೋಚಕ ಜಯ

ಮಂಗಳವಾರ, 26 ಏಪ್ರಿಲ್ 2022 (08:00 IST)
ಮುಂಬೈ: ಐಪಿಎಲ್ 2022 ರಲ್ಲಿ ಸಿಎಸ್ ಕೆ ಎದುರಿನ ಪಂದ್ಯದಲ್ಲಿ ಕಿಂಗ್ಸ್ ಪಂಜಾಬ್ 11 ರನ್ ಗಳಿಂದ ರೋಚಕವಾಗಿ ಪಂದ್ಯ ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಶಿಖರ್ ಧವನ್ (88) ಬಿರುಸಿನ ಬ್ಯಾಟಿಂಗ್ ನಿಂದಾಗಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 187 ರನ್ ಕಲೆ ಹಾಕಿತು. ಬಿ ರಾಜಪಕ್ಸೆ 42 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಸಿಎಸ್ ಕೆ ಅಂಬಟಿ ರಾಯುಡು (78 ರನ್) ಹೋರಾಟದ ಹೊರತಾಗಿಯೂ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಲಷ್ಟೇ ಶಕ್ತವಾಯಿತು. ಋತುರಾಜ್ ಗಾಯಕ್ ವಾಡ್ 30 ರನ್ ಗಳಿಸಿದರು. ಇದರೊಂದಿಗೆ ಪಂಜಾಬ್ ಸತತ ಮೂರನೇ ಗೆಲುವು ಕಂಡಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ