ಹೊಸ ತವರು ಮೈದಾನದಲ್ಲಿ ಕಿಂಗ್ಸ್ ಇಲೆವನ್ ರಾಯಲ್ಸ್ ವಿರುದ್ಧ ಹೋರಾಟ

ಶುಕ್ರವಾರ, 10 ಏಪ್ರಿಲ್ 2015 (18:19 IST)
ಕಿಂಗ್ಸ್ ಇಲೆವನ್ ಪಂಜಾಬ್ ಮಾಜಿ ಚಾಂಪಿಯನ್ನರಾದ ರಾಜಸ್ಥಾನ ರಾಯಲ್ಸ್ ವಿರುದ್ಧ ಶನಿವಾರ  ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ತಮ್ಮ ಚೊಚ್ಚಲ ಐಪಿಎಲ್ ಪಂದ್ಯವಾಡಲಿದ್ದು, ತಮ್ಮ ಹೊಸ ತವರು ಮೈದಾನಕ್ಕೆ  ತಕ್ಷಣವೇ ಹೊಂದಿಕೊಂಡಂತೆ ಕಾಣುತ್ತಿದೆ.

ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕ ಜಾರ್ಜ್ ಬೈಲಿ ಕಳೆದ ಆವೃತ್ತಿಯಲ್ಲಿ 257 ರನ್ ಬಾರಿಸಿದ್ದರು. ಆದರೆ ಹಿಂದಿನ ಐಪಿಎಲ್‌ನಲ್ಲಿ ಒಟ್ಟು 552 ರನ್ ಕಲೆಹಾಕಿದ ಗ್ಲೆನ್ ಮ್ಯಾಕ್ಸ್‌ವೆಲ್ ತಂಡದ ಟ್ರಂಪ್‌ಕಾರ್ಡ್ ಆಗಿದ್ದಾರೆ. 
 
ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಮತ್ತು ಭಾರತದ ಮೂವರಾದ ಸೆಹ್ವಾಗ್, ಮನನ್ ವೋಹ್ರಾ ಮತ್ತು ವೃದ್ಧಿಮಾನ್ ಸಹಾ ಕಂಪನಿಯೊಂದಿಗೆ ಮ್ಯಾಕ್ಸ್‌ವೆಲ್ ತಂಡದ ಅದೃಷ್ಟವನ್ನು ಈ ಬಾರಿಯೂ ಬದಲಿಸುತ್ತಾರೆಂದು ವಿಶ್ವಾಸ ಹೊಂದಲಾಗಿದೆ.  ಬೌಲಿಂಗ್ ವಿಭಾಗ ಕೂಡ ಆಸ್ಟ್ರೇಲಿಯಾದ ಮಿಚೆಲ್ ಜಾನ್ಸನ್ ಅವರಿಂದ ಬಲಿಷ್ಠವಾಗಿದೆ.
 ಮೂವರು ವಿಶ್ವಕಪ್ ವಿಜೇತ ತಂಡದ ಆಟಗಾರರಾದ ಶೇನ್ ವಾಟ್ಸನ್, ಸ್ಟೀವ್ ಸ್ಮಿತ್ ಮತ್ತು ಜೇಮ್ಸ್ ಫಾಕ್ನರ್ ಬಲವನ್ನು ಹೊಂದಿರುವ ರಾಜಸ್ಥಾನ ರಾಯಲ್ಸ್  ಹರಾಜಿನಲ್ಲಿ ತಮ್ಮ ಅತೀ ದುಬಾರಿ ಖರೀದಿಯಾದ ಕ್ರಿಸ್ ಮೋರಿಸ್ ಸಕಾರಾತ್ಮಕ ಆರಂಭ ಮಾಡುತ್ತಾರೆಂದು ನಿರೀಕ್ಷಿಸಿದೆ.  ಮಾರಿಸ್ ಅವರನ್ನು ಆಲ್ ರೌಂಡ್  ಆಟದ ಕೌಶಲ್ಯಕ್ಕಾಗಿ ಖರೀದಿಸಲಾಗಿದೆ.
 
 ಆದರೆ ರಾಯಲ್ಸ್ ತಂಡಕ್ಕೆ ಈಗಿರುವ ದೊಡ್ಡ ಸವಾಲು ತಮ್ಮ ಹೊಸ ತವರಿಗೆ ಹೊಂದಿಕೊಳ್ಳುವುದು. ರಾಜಸ್ಥಾನ್ ಕ್ರಿಕೆಟ್ ಸಂಸ್ಥೆ ಜೊತೆ ವಿವಾದದಿಂದ ಅವರ ಜೈಪುರದ ವಾಸ್ತವ ತವರು ಮೈದಾನವನ್ನು ಪಟ್ಟಿಯಿಂದ ತೆಗೆದಿರುವುದರಿಂದ ಹೊಸ ತವರು ಮೈದಾನಕ್ಕೆ ಅವರು ಹೊಂದಿಕೊಳ್ಳಬೇಕಾಗಿದೆ. 
 
ನಾಯಕ ವಾಟ್ಸನ್ ಮತ್ತು ಸ್ಟುವರ್ಟ್ ಬಿನ್ನಿ ಆಲ್‌ರೌಂಡ್ ಪಾತ್ರವನ್ನು ವಹಿಸಿರುವ ನಡುವೆ, ಮಾರಿಸ್ ಸೇರ್ಪಡೆಯಿಂದ ರಾಯಲ್ಸ್‌ಗೆ ಇನ್ನಷ್ಟು ಹೆಚ್ಚು ಆಯ್ಕೆಗಳು ಲಭ್ಯವಾಗಿವೆ. 
 ಅವರು ಇಬ್ಬರು ಲೆಗ್‌ಸ್ಪಿನ್ನರ್‌ಗಳಾದ ದಿನೇಶ್ ಸಾಲುಂಕೆ ಮತ್ತು ಪರದೀಪ್ ಸಾಹು ಅವರನ್ನು ಕೂಡ ತಂದಿದ್ದು,ಈ ಮಾದರಿಯ ಆಟದಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲರು.
 
 ಕಿಂಗ್ಸ್ ಇಲೆವೆನ್ ಪಂಜಾಬ್: ಅಕ್ಷರ್ ಪಟೇಲ್, ಅನುರೀತ್  ಸಿಂಗ್,ಬ್ಯುರಾನ್ ಹೆಂಡ್ರಿಕ್ಸ್, ಡೇವಿಡ್ ಮಿಲ್ಲರ್, ಜಾರ್ಜ್ ಬೈಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಗುರ್ಕೀರತ್ ಸಿಂಗ್ ಮನ್, ಕರಣ್ ವೀರ್  ಸಿಂಗ್, ಮನನ್ ವೋರಾ, ಮಿಚೆಲ್ ಜಾನ್ಸನ್, ಪರ್ವಿಂದರ್ ಅವಾನ, ರಿಷಿ ಧವನ್, ಸಂದೀಪ್ ಶರ್ಮಾ, ಶಾರ್ದೂಲ್ ಥಾಕೂರ್, ಶೇನ್ ಮಾರ್ಷ್, ಶಿವಂ ಶರ್ಮಾ, ತಿಸಾರ ಪೆರೇರಾ, ವೀರೇಂದ್ರ ಸೆಹ್ವಾಗ್, ವೃದ್ಧಿಮಾನ್ ಸಹಾ, ಮುರಳಿ ವಿಜಯ್, ನಿಖಿಲ್ ನಾಯ್ಕ, ಯೋಗೇಶ್ ಗೋಲ್ವಾಲ್ಕರ್
 
ರಾಜಸ್ಥಾನ್ ರಾಯಲ್ಸ್: ಶೇನ್ ವಾಟ್ಸನ್, ಅಭಿಷೇಕ್ ನಾಯರ್, ಅಜಿಂಕ್ಯಾ ರಹಾನೆ, ಅಂಕಿತ್ ನಾಗೇಂದ್ರ ಶರ್ಮಾ, ಬೆನ್ ಕಟಿಂಗ್, ದೀಪಕ್ ಹೂಡಾ, ಧವಳ್ ಕುಲಕರ್ಣಿ, ದಿಶಾಂತ್ ಯಾಗ್ನಿಕ್, ಜೇಮ್ಸ್ ಫಾಕ್ನರ್, ಕೇನ್ ರಿಚರ್ಡ್ಸನ್, ಕರುಣ್ ನಾಯರ್, ತಂಬೆ, ರಾಹುಲ್ ಟೆವಾಟಿಯಾ, ರಜತ್ ಭಾಟಿಯಾ, ಸಂಜು ಸ್ಯಾಮ್ಸನ್, ಸ್ಟೀವನ್ ಸ್ಮಿತ್, ಸ್ಟುವರ್ಟ್ ಬಿನ್ನಿ, ಟಿಮ್ ಸೌಥಿ, ವಿಕ್ರಮಜೀತ್ ಮಲಿಕ್, ಕ್ರಿಸ್ ಮಾರಿಸ್, ಜುವಾನ್ ಥೆರಾನ್, ಬಾರಿಂದರ್  ಸಿಂಗ್ ಶರಣ್, ದಿನೇಶ್ ಸಾಲುಂಕೆ,  ಸಾಗರ್ ತ್ರಿವೇದಿ, ಪರ್ದೀಪ್ ಸಾಹು.

ವೆಬ್ದುನಿಯಾವನ್ನು ಓದಿ