ಮೇಲಿನ ಕ್ರಮಾಂಕದ ವೈಫಲ್ಯಕ್ಕೆ ಪಂಜಾಬ್ ನಾಯಕ ಜಾರ್ಜ್ ಬೈಲಿ ಟೀಕೆ

ಮಂಗಳವಾರ, 28 ಏಪ್ರಿಲ್ 2015 (10:03 IST)
ಕಿಂಗ್ಸ್ ಇಲೆವನ್ ಪಂಜಾಬ್ ನಾಯಕ ಜಾರ್ಜ್ ಬೈಲಿ ತಮ್ಮ ತಂಡದ ಕಳಪೆ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ನಿರಾಸೆಗೊಂಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸೋಮವಾರ 20 ರನ್‌ಗಳಿಂದ ಪಂಜಾಬ್ ಸೋಲಪ್ಪಿತ್ತು. 151 ರನ್ ಬೆನ್ನೆತ್ತಿದ ಕಿಂಗ್ಸ್ ಆಗಾಗ್ಗೆ ವಿಕೆಟ್ ಕಳೆದುಕೊಂಡು, ವೃದ್ಧಿಮಾನ್ ಸಹಾ ಅವರ ದಿಟ್ಟ ಪ್ರಯತ್ನದ ನಡುವೆಯೂ ಸೋಲನುಭವಿಸಿತು. ಸಹಾ 33 ಎಸೆತಗಳಲ್ಲಿ 42 ರನ್ ಹೊಡೆದರು.
 
ಮೇಲಿನ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯವೇ ನಮ್ಮ ಸೋಲಿಗೆ ಕಾರಣ. ನಾವು ಉತ್ತಮ ಜತೆಯಾಟ ಆಡುವ ಅಗತ್ಯವಿದೆ ಎಂದು ಬೈಲಿ ಪಂದ್ಯದ ನಂತರ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಹೇಳಿದರು.
 
ವೇಗಿಗಳ ಪ್ರಯತ್ನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಬೈಲಿ ಡೆತ್ ಓವರ್‌ಗಳಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿದರೆಂದು ಹೇಳಿದರು. ನಮ್ಮ ತಂಡಕ್ಕೆ ತಿರುವು ನೀಡಲು ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದು, ಕಮ್‌ಬ್ಯಾಕ್ ಆಗುವ ವಿಶ್ವಾಸವನ್ನು ವ್ಯಕ್ತಪಡಿಸಿದರು. 

ವೆಬ್ದುನಿಯಾವನ್ನು ಓದಿ