ಮತ್ತೆ ಮಿಂಚಿದ ಗಂಭೀರ್: ಡೆಲ್ಲಿ ವಿರುದ್ಧ ನೈಟ್ ರೈಡರ್ಸ್‌ಗೆ ಜಯ

ಮಂಗಳವಾರ, 21 ಏಪ್ರಿಲ್ 2015 (12:05 IST)
ಗೌತಮ್ ಗಂಭೀರ್ ಅವರ ಐಪಿಎಲ್‌‍ನ 3ನೇ ಅರ್ಧಶತಕದ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್  ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದೆ.  147 ರನ್ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಕೆಕೆಆರ್ ಬೇಗನೇ ಕೆಲವು ವಿಕೆಟ್ ಕಳೆದುಕೊಂಡರೂ ಗಂಭೀರ್ (60) ಮತ್ತು ಯುಸುಫ್ ಪಠಾಣ್(40 ನಾಟೌಟ್) ನಾಲ್ಕನೇ ವಿಕೆಟ್‌ಗೆ 65 ರನ್ ಜೊತೆಯಾಟದ ಮೂಲಕ ಹಾಲಿ ಚಾಂಪಿಯನ್ನರು 18. 1ಓವರುಗಳಲ್ಲಿ ಗುರಿ ಮುಟ್ಟಿದರು. 
 
ಡೋಮಿನಿಕ್ ಮುತ್ತುಸ್ವಾಮಿ ತಮ್ಮ ಎರಡನೇ ಓವರಿನಲ್ಲಿ ನೈಟ್ ರೈಡರ್ಸ್‌ನ 2 ವಿಕೆಟ್ ಬಲಿತೆಗೆದುಕೊಂಡರು. ರಾಬಿನ್ ಉತ್ತಪ್ಪಾ ಅವರು ಮಿಡ್‌ಆಫ್‌ನಲ್ಲಿ ಕ್ಯಾಚ್ ನೀಡಿ ಔಟಾದರು ಮತ್ತು ಮೂರು ಎಸೆತಗಳ ನಂತರ ಮನೀಶ್ ಪಾಂಡೆ  ಇಮ್ರಾನ್ ತಾಹಿರ್‌ಗೆ  ಕ್ಯಾಚಿತ್ತು ಶೂನ್ಯಕ್ಕೆ ಔಟಾದರು.  

ನಾಥನ್ ಕೌಲ್ಟರ್ ನೈಸ್ ಕೂಡ ಉತ್ತಮ ಬೌಲಿಂಗ್ ಮಾಡಿ ಸೂರ್ಯಕುಮಾರ್ ಯಾದವ್ ಅವರನ್ನು 24 ರನ್‌ಗಳಿಗೆ ಔಟ್ ಮಾಡಿದರು. ಆದರೆ ಗಂಭೀರ್ 8 ಬೌಂಡರಿಗಳ 60 ರನ್ ಮತ್ತು ಯೂಸುಫ್ 26 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್‌ ಮೂಲಕ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.
 
ಇದಕ್ಕೆ ಮುಂಚೆ ಕೆಕೆಆರ್ ಬೌಲರುಗಳಾದ ಮಾರ್ನೆ ಮಾರ್ಕೆಲ್ ಮತ್ತು ಉಮೇಶ್ ಯಾದವ್ ಬಿಗಿಯಾದ ಬೌಲಿಂಗ್ ದಾಳಿಯ ಮೂಲಕ ಡುಮಿನಿ ಸಾರಥ್ಯದ ತಂಡವನ್ನು 146ಕ್ಕೆ ನಿರ್ಬಂಧಿಸಿದರು. ಡೆಲ್ಲಿ ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡು ಆಘಾತ ಅನುಭವಿಸಿ ಮ್ಯಾಥೀವ್ಸ್ 21 ಎಸೆತಗಳಲ್ಲಿ 28 ಸ್ಕೋರ್ ಮಾಡುವ ಮೂಲಕ ಸಾಧಾರಣ ಮೊತ್ತವನ್ನು ಮುಟ್ಟಲು ಸಾಧ್ಯವಾಯಿತು. ಮಾರ್ಕೆಲ್, ಯಾದವ್ ಮತ್ತು ಪಿಯೂಶ್ ಚಾವ್ಲಾ ತಲಾ 2 ವಿಕೆಟ್ ಗಳಿಸಿದ್ದರು. 

ವೆಬ್ದುನಿಯಾವನ್ನು ಓದಿ