ಎರಡನೇ ಬಾರಿ ಐಪಿಎಲ್ ಗೆದ್ದ ಕೆಕೆಆರ್ ತಂಡಕ್ಕೆ ಮಮತಾ ಅಭಿನಂದನೆ

ಸೋಮವಾರ, 2 ಜೂನ್ 2014 (13:23 IST)
ನಿನ್ನೆ ಬೆಂಗಳೂರಿನ  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ ಅಂತಿಮ ಹಣಾಹಣಿಯಲ್ಲಿ ಕಿಂಗ್ಸ್ XI  ಪಂಜಾಬ್ ತಂಡದ ಎದುರು ರೋಮಾಂಚನಕಾರಿ ಆಟ ಪ್ರದರ್ಶಿಸಿ ಎರಡನೇ ಬಾರಿ ಪ್ರಶಸ್ತಿಯನ್ನು ಎತ್ತಿ ಹಿಡಿದ ಗಂಭೀರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ. 
 
ಕೆಕೆಆರ್ ಪಂದ್ಯ ಗೆದ್ದ ಕೆಲ ಕ್ಷಣದಲ್ಲೇ ಅಭಿನಂದನೆಗಳು "ಕೆಕೆಆರ್, ಅಭಿನಂದನೆಗಳು ಶಾರುಖ್" ಎಂದು ಮಾಯಾವತಿ  ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ
 
ಕೆಕೆಆರ್ ವಿರುದ್ಧ ಶತಕ ಸಿಡಿಸಿದ  ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಅವರನ್ನು ಕೂಡ ಮಮತಾ ಅಭಿನಂದಿಸಿದ್ದಾರೆ.
 
"ವೃದ್ಧಿಮಾನ್‌ರವರ ಅತ್ಯುತ್ತಮ ಪ್ರದರ್ಶನಕ್ಕೆ ನನ್ನ ಅಭಿನಂದನೆಗಳು" ಎಂದು ಅವರ ಫೇಸ್‌ಬುಕ್‌ ಪೋಸ್ಟಿಂಗ್ ತೋರಿಸುತ್ತದೆ.  
 
ಮಾಜಿ ಕೆಕೆಆರ್ ಆಟಗಾರ ವೃದ್ಧಿಮಾನ್ 49 ಎಸೆತಗಳಲ್ಲಿ ಶತಕ ಸಿಡಿಸುವುದರ ಮೂಲಕ ಐಪಿಎಲ್ ಫೈನಲ್‌ನಲ್ಲಿ ಶತಕ ದಾಖಲಿಸಿದ ಪ್ರಥಮ ಆಟಗಾರರಾದರು. 
 
ಪಂಜಾಬ್ ದಾಖಲಿಸಿದ 199 ರನ್‌ಗಳನ್ನು ಬೆನ್ನಟ್ಟಿದ ಕೆಕೆಆರ್ ಮನೀಷ್ ಪಾಂಡೆಯವರ ಸ್ಪೋಟಕ ಬ್ಯಾಟಿಂಗ್ (54 ಎಸೆತ 94 ರನ್) ಮೂಲಕ 3 ಎಸೆತಗಳು ಬಾಕಿ ಇರುವಂತೆ ಗೆಲುವನ್ನು ಸಾಧಿಸಿದರು. 
 
ಕೆಕೆಆರ್ ಜಯದ ಪರಿಣಾಮ ಕೋಲ್ಕತ್ತಾದಾದ್ಯಂತ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಶಾರುಖ್ ಖಾನ್ ಒಡೆತನದ ತಂಡ ಗೆಲುವು ಸಾಧಿಸಿದ್ದಕ್ಕೆ  ಶೋಭಾ ಬಾಜಾರ್, ಪಾರ್ಕ್ ರಸ್ತೆ ಸೇರಿದಂತೆ ನಗರದಾದ್ಯಂತ ತಡರಾತ್ರಿಯವರೆಗೂ ಸಂಭ್ರಮಾಚರಣೆ ನಡೆದಿತ್ತು. 
 
ಕೆಕೆಆರ್ ಧ್ವಜವನ್ನು ಹಿಡಿದುಕೊಂಡಿದ್ದ ಅಭಿಮಾನಿಗಳ, ಟೀಮ್ ಸ್ಲೋಗನ್ 'ಕೋರ್ಬೋ, ಲೋರ್ಬೋ, ಜೀತ್‌ಬೋ ರೇ' ಎಂಬ ಘೋಷಣೆಗಳು ಮುಗಿಲು ಮುಟ್ಟಿತ್ತು. 

ವೆಬ್ದುನಿಯಾವನ್ನು ಓದಿ