MI vs SRH Match: ಬೋಲ್ಟ್‌ ದಾಳಿಗೆ ತತ್ತರಿಸಿದ ಹೈದರಾಬಾದ್‌: ಮುಂಬೈ ಗೆಲುವಿಗೆ 144 ರನ್‌ಗಳ ಗುರಿ

Sampriya

ಬುಧವಾರ, 23 ಏಪ್ರಿಲ್ 2025 (21:25 IST)
Photo Courtesy X
ಹೈದರಾಬಾದ್‌: ಇಂದು ಇಲ್ಲಿ ನಡೆದ ಐಪಿಎಲ್‌ ಪಂದ್ಯಾಟದಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿಗೆ ಹೈದರಾಬಾದ್‌ 144 ಗೆಲುವಿನ ಗುರಿಯನ್ನು ನೀಡಿದೆ.

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್‌, ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಹೈದರಾಬಾದ್‌  20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 143ರನ್ ಗಳಿಸಿತು.

13 ರನ್‌ಗೆ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಹೈದರಾಬಾದ್‌ ತಂಡಕ್ಕೆ ಹೆನ್‌ರಿಚ್‌ ಕ್ಲಾಸೆನ್‌ ಮತ್ತು ಅಭಿನವ್‌ ಮನೋಹರ್‌ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾದರು. ಟ್ರಂಟ್‌ ಬೋಲ್ಟ್‌ ನಾಲ್ಕು ವಿಕೆಟ್‌ ಪಡೆದು ಮಿಂಚಿದರು.

ಹೈದರಾಬಾದ್‌ನ ರಾಜೀವ್ ಗಾಂಧಿ ಇಂಡರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯಾಟದಲ್ಲಿ ಹೈದರಾಬಾದ್‌ಗೆ ಗೆಲುವಿಗಾಗಿ ಭಾರೀ ಲೆಕ್ಕಚಾರದೊಂದಿಗೆ ಗ್ರೌಂಡ್‌ಗೆ ಇಳಿದಿತ್ತು.

ಮುಂಬೈ ಇಂಡಿಯನ್ಸ್‌ಗೆ ತಲೆನೋವಾಗಿದ್ದ ಟ್ರಾವಿಸ್ ಹೆಡ್‌  1 ರನ್‌ ಗಳಿಸದೆಯೇ ಔಟ್ ಆಗುವ ಮೂಲಕ ಆಘಾತವಾಯಿತು. ಆರಂಭಿಕ ಹಂತದಲ್ಲೇ ಎಡವಿದ ಹೈದರಬಾದ್‌ಗೆ ಹೆನ್‌ರಿಚ್ ಕ್ಲಾಸೆನ್ ಅವರು 44 ಎಸೆತಗಳಲ್ಲಿ 71ರನ್ ತಂದುಕೊಟ್ಟು ಆಟಕ್ಕೆ ಜೀವ ತುಂಬಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ