ರಾಯಲ್ಸ್ ವಿರುದ್ಧ ಪರಿಪೂರ್ಣ ಪ್ರದರ್ಶನ: ಆರ್‌ಸಿಬಿಯನ್ನು ಶ್ಲಾಘಿಸಿದ ಸ್ಟಾರ್ಕ್

ಶನಿವಾರ, 25 ಏಪ್ರಿಲ್ 2015 (11:59 IST)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ಪ್ರಯತ್ನದ ಬಗ್ಗೆ ಮಿಚೆಲ್ ಸ್ಟಾರ್ಕ್ ಶ್ಲಾಘಿಸಿದ್ದಾರೆ.  ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಸ್ಟಾರ್ಕ್  22 ರನ್ ನೀಡಿ ಮೂರು ವಿಕೆಟ್ ಕಬಳಿಸುವ ಮೂಲಕ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಪುರಸ್ಕೃತರಾಗಿದ್ದರು. 
 
ಪಂದ್ಯದ ನಂತರ , ಬ್ಯಾಟ್ ಮತ್ತು ಬಾಲ್ ಮೂಲಕ ಐಪಿಎಲ್ 8ರಲ್ಲಿ ಆರ್‌ಸಿಬಿಯ ಪರಿಪೂರ್ಣ ಪ್ರದರ್ಶನ ಎಂದು ಸ್ಟಾರ್ಕ್ ಹೇಳಿದರು.  ಹಿಂದಿನ ಪಂದ್ಯಗಳಲ್ಲಿ ನಾವು ಬ್ಯಾಟಿಂಗ್ ಮತ್ತು ಬೌಲಿಂಗ್ ಚೆನ್ನಾಗಿ ಮಾಡಲಿಲ್ಲ. ಚೆನ್ನೈ ವಿರುದ್ಧ ನಾವು ಬೌಲಿಂಗ್ ಮತ್ತು ಫೀಲ್ಡಿಂಗ್ ಚೆನ್ನಾಗಿ ಮಾಡಿದ್ದರೂ ಬ್ಯಾಟಿಂಗ್ ಸರಿಯಾಗಿ ಮಾಡಿರಲಿಲ್ಲ. ಪಂದ್ಯದ ನಂತರ ನಾವು ಕುಳಿತು ಮಾತನಾಡಿ ಸೋಲಿನಿಂದ ಪಾಠ ಕಲಿಯುತ್ತಿದ್ದೇವೆ ಎಂದು ಸ್ಟಾರ್ಕ್ ಹೇಳಿದರು. 
 
 ವಿಶ್ವಕಪ್ ಪಂದ್ಯಾವಳಿ ಶ್ರೇಷ್ಟರಾಗಿದ್ದ ಸ್ಟಾರ್ಕ್ ಮೊದಲ ಸ್ಪೆಲ್‍‌ನಲ್ಲಿ 2-0-16-0ಯಿಂದ ಉತ್ತಮ ಆರಂಭ ಕಂಡಿರಲಿಲ್ಲ. ಆದರೆ ಡೆತ್ ಓವರ್‌ಗಳಲ್ಲಿ ಮಾರಕ ಬೌಲಿಂಗ್ ದಾಳಿಯಿಂದ ಮೂರು ವಿಕೆಟ್ ಕಬಳಿಸಿದರು. 

ವೆಬ್ದುನಿಯಾವನ್ನು ಓದಿ