ನಿನ್ನೆ ನಡೆದ ಐಪಿಎಲ್ ಪಂದ್ಯದ ವೇಳೆ ಪುಣೆ ತಂಡದ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಡಿಆರ್`ಎಸ್ ಕಾಮಿಡಿ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಮ್ರಾನ ತಾಹಿರ್ ಎಸೆದ ಚೆಂಡು ಪೊಲ್ಲಾರ್ಡ್ ಪ್ಯಾಡಿಗೆ ತಗುಲಿತ್ತು ಈ ಸಂದರ್ಭ ಧೋನಿ ತಮಾಷೆಗೆ ಡಿಆರ್`ಎಸ್ ಸಿಗ್ನಲ್ ಮಾಡಿದರು.
ಆದರೆ, ಇದನ್ನ ಪ್ರೇಕ್ಷಕರು ತಮಾಷೆ ಅಂದುಕೊಂಡಿರಬಹುದು, ರೆಫರಿ ಮನು ನಯ್ಯರ್ ಮಾತ್ರ ಗಂಭೀರವಾಗಿ ಪರಿಗಣಿಸಿದ್ದಾರೆ. ಬಿಸಿಸಿಐ ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ, ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದರಿಂದ ಧೋನಿಗೆ ವಾಗ್ದಂಡನೆ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆ ಲೆವೆಲ್-1 ಅಪರಾಧ ಮಾಡಿದ್ದಾಗಿ ಧೋನಿ ಒಪ್ಪಿಕೊಂಡಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಧೋನಿಯ ಈನಡವಳಿಕೆಯಿಂದ ಕ್ರೀಡಾ ಸ್ಫೂರ್ತಿಗೆ ಧಕ್ಕೆಯಾಗಿದೆ ಎಂದು ಮ್ಯಾಚ್ ರೆಫರಿ ಅಭಿಪ್ರಾಯಪಟ್ಟಿದ್ದಾರೆ.