ಐಪಿಎಲ್ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡದ ಸಂಭ್ರಮಾಚರಣೆ

ಮಂಗಳವಾರ, 26 ಮೇ 2015 (12:52 IST)
ಮುಂಬೈ ಇಂಡಿಯನ್ಸ್ ತಂಡವು ವಾಂಖಡೆ ಕ್ರೀಡಾಂಗಣದಲ್ಲಿ ಎರಡನೇ ಐಪಿಎಲ್ ಫೈನಲ್ ವಿಜೇತರಾಗುತ್ತಿದ್ದಂತೆ ಸಂಭ್ರಮಾಚರಣೆಯಲ್ಲಿ ಮುಳುಗಿತು. ವಿಜಯೀ ತಂಡಕ್ಕೆ ಚಿಯರ್ ಮಾಡಲು ಅಭಿಮಾನಿಗಳು ಮೈದಾನದಲ್ಲಿ ಮುತ್ತಿಕೊಂಡರು. 
 
 ನಾಯಕ ರೋಹಿತ್ ಶರ್ಮಾ ಮತ್ತು ಮುಂಬೈ ಫ್ರಾಂಚೈಸಿ ಒಡತಿ ನೀತಾ ಅಂಬಾನಿ, ಕ್ರಿಕೆಟ್ ಕಣ್ಮಣಿ ಸಚಿನ್ ತೆಂಡೂಲ್ಕರ್ ಮತ್ತು ಬೆಂಬಲ ಸಿಬ್ಬಂದಿಯ ಸದಸ್ಯರಾದ ರಿಕಿ ಪಾಂಟಿಂಗ್, ಜಾನ್ ರೈಟ್, ಜಾಂಟಿ ರೋಡ್ಸ್, ಅನಿಲ್ ಕುಂಬ್ಳೆ, ರಾಬಿನ್ ಸಿಂಗ್ ಮತ್ತು ಶೇನ್ ಬಾಂಡ್ ವಿಜಯದ ಓಟ ಕೈಗೊಳ್ಳುತ್ತಿದ್ದಂತೆ ಗುಂಪು ಮುಂಬೈ ಧ್ವಜಗಳನ್ನು ಬೀಸಿ ಹರ್ಷೋದ್ಗಾರ ಮಾಡಿತು
 ತಂಡದ ಆಟಗಾರರಾದ ಹರ್ಭಜನ್, ಮಾಲಿಂಗಾ, ಪಾರ್ಥಿವ್ ಪಟೇಲ್, ಕೀರನ್ ಪೋಲಾರ್ಡ್, ಅಂಬಾಟಿ ರಾಯುಡು ಟ್ರೋಫಿಯೊಂದಿಗೆ ಛಾಯಾಚಿತ್ರಕ್ಕೆ ಭಂಗಿ ನೀಡಿದಾಗ ಪುಳುಕಿತರಾಗಿದ್ದರು.
 
 ಈ ಸಂದರ್ಭದಲ್ಲಿ ಹಾಜರಿದ್ದ ನೀತು ಅಂಬಾನಿ ಮುಂಬೈ ಇಂಡಿಯನ್ಸ್ ನನ್ನ ಜಗತ್ತಾಗಿದ್ದು, ಇಲ್ಲಿರುವ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ಸೂಚಿಸಿದರು. ಗೋ ಈಸ್ಟ್ ಗೋ ವೆಸ್ಟ್ ಮುಂಬೈ ಈಸ್ ದಿ ಬೆಸ್ಟ್ ಎಂಬ ಘೋಷಣೆಯನ್ನೂ ಅಂಬಾನಿ ಮಾಡಿದರು.  ಇಂತಹ ಕ್ಷಣಗಳು ಜೀವನದಲ್ಲಿ ಸಿಗುವುದು ಬಹಳ ಕಡಿಮೆ. ನಿಮ್ಮ ಜೊತೆ ಈ ಸಂತೋಷವನ್ನು ಹಂಚಿಕೊಂಡಾಗ ಅದಕ್ಕೆ ಇನ್ನಷ್ಟು ಅರ್ಥ ಸಿಗುತ್ತದೆ. ನಿಮ್ಮ ಬೆಂಬಲಕ್ಕಾಗಿ ತುಂಬಾ ಧನ್ಯವಾದಗಳು ಎಂದು ಸಚಿನ್ ತೆಂಡೂಲ್ಕರ್ ಹೇಳಿದರು. 
ಯಾವುದೇ ತಂಡದ ನಿಜವಾದ ಸಾಮರ್ಥ್ಯವು ಕಠಿಣ ಸನ್ನಿವೇಶಗಳಲ್ಲಿ ಪ್ರದರ್ಶನವಾಗುತ್ತದೆ. ಇಡೀ ತಂಡಕ್ಕೆ, ಬೆಂಬಲ ಸಿಬ್ಬಂದಿಗೆ ಈ ಕ್ರೆಡಿಟ್ ಸಲ್ಲುತ್ತದೆ ಎಂದು ನುಡಿದರು. 

ವೆಬ್ದುನಿಯಾವನ್ನು ಓದಿ