ನಾವು ಐಪಿಎಲ್‌ನ್ನು ಗೆಲ್ಲುತ್ತೇವೆ ಎಂದು ಯಾರೂ ಯೋಚಿಸಿರಲಿಲ್ಲ: ಗೌತಿ

ಸೋಮವಾರ, 2 ಜೂನ್ 2014 (13:27 IST)
ಎರಡನೇ ಬಾರಿ ಐಪಿಎಲ್‌ ಪ್ರಶಸ್ತಿಯನ್ನು ಹಿಡಿದೆತ್ತಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ನಾವು ಈ ಬಾರಿಯ ವಿಜೇತರಾಗುತ್ತೇವೆ ಎಂದು ಯಾರು ಕೂಡ ಯೋಚಿಸಿರಲಿಲ್ಲ ಎಂದು ಹೇಳಿದ್ದಾರೆ. 
 
ಪ್ರಥಮ 7 ಪಂದ್ಯಗಳ ನಂತರ ನಾವಿದ್ದ ಸ್ಥಿತಿಯನ್ನು ನೋಡಿ, ಹೆಚ್ಚಿನ ಜನ ನಾವು ಈಗಿರುವ ಸ್ಥಿತಿಯ ಕುರಿತು ಯೋಚಿಸಿರಲಿಕ್ಕಿಲ್ಲ. ಹುಡುಗರು ಅತಿಯಾದ ಒತ್ತಡವನ್ನು ಎದುರಿಸಿದರು.ಅವರಿಗೆ ಹೆಚ್ಚಿನ ಕ್ರೆಡಿಟ್ ಸಲ್ಲಿಕೆಯಾಗಬೇಕು ಎಂದು ಗೌತಿ ಅಭಿಪ್ರಾಯ ಪಟ್ಟಿದ್ದಾರೆ.  
 
"ಅತಿ ಚಿಕ್ಕ ಮೈದಾನವಾಗಿರುವ ಚಿನ್ನಸ್ವಾಮಿಯಲ್ಲಿ ರಕ್ಷಣಾತ್ಮಕ ಆಟವಾಡುವುದು ಕಷ್ಟ. ಪ್ರತಿ 5 ಓವರ್‌ಗಳಲ್ಲಿ 50, 60 ರನ್ ಗಳಿಸಲು ನಾವು ಯೋಜನೆಯನ್ನು ರೂಪಿಸಿದ್ದೆವು. ಮನೀಷ್, ಅದ್ಭುತ ಇನ್ನಿಂಗ್ಸ್ ಆಡಿದರು ಯೂಸುಫ್‌ಗೆ ಪೆಟ್ಟಾಗಿತ್ತು, ಚಾವ್ಲಾ ಮುಖ್ಯ ಸಿಕ್ಸರ್ ಬಾರಿಸಿದರು. ವೃದ್ಧಿಮಾನ್ ಸಹ ನಂಬಲಾರದ ಇನ್ನಿಂಗ್ಸ್ ಆಡಿದ್ದರು.  ಆದರೆ ಮನೀಷ್ ಫಿಯರ್ಲೆಸ್ ಆಟ ಪ್ರದರ್ಶಿಸಿದರು" ಎಂದು  ತಮ್ಮ ಗೆಲುವಿನ ಪುಟ್ಟ ವಿವರಣೆಯನ್ನು ಗೌತಮ ನೀಡಿದರು. 
 
ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ಪಾಂಡೆ ಈಗಾಗಲೇ ರಣಜಿ ಟ್ರೋಫಿ, ಇರಾನಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ ತಂಡದ ಸದಸ್ಯನಾಗಿದ್ದ ನನಗೆ ಈ ಗೆಲುವು  "ಕೇಕ್ ಮೇಲಿನ ಕ್ರಿಮ್ " ಹಾಗೆ ಎಂದು ಹೇಳಿದ್ದಾರೆ 
 
"ನಾವು ನಾಲ್ಕು  ಸಾಧನೆಯನ್ನು ಮಾಡಿದ್ದೇವೆ. ರಣಜಿ ಟ್ರೋಫಿ, ಇರಾನಿ, ವಿಜಯ್ ಹಜಾರೆ ಟ್ರೋಫಿಯನ್ನು ಗೆದ್ದಿರುವ ನನಗೆ ಐಪಿಎಲ್ ಗೆಲುವು ಕೇಕ್ ಮೇಲಿನ ಚೆರ್ರಿಯಂತೆ" ಎಂದು ಕೆಕೆಆರ್ ಗೆಲುವಿನ ರೂವಾರಿ ಪಾಂಡೆ ಹರ್ಷ ವ್ಯಕ್ತ ಪಡಿಸಿದ್ದಾರೆ. 
 
ಕಷ್ಟದ ಪಂದ್ಯದಲ್ಲಿ 50 ಎಸೆತಕ್ಕೆ 94 ರನ್ ಬಾರಿಸಿದ ಪಾಂಡೆ " ನಾನು ಬಹಳ ಆಶಾವಾದಿ ಮನುಷ್ಯ, ಮತ್ತು ಸವಾಲಿನ ಆಟ ಆಡುವುದನ್ನು ಪ್ರೀತಿಸುತ್ತೇನೆ.ಪ್ರಥಮ ಓವರ್‌ನಲ್ಲಿ ನಾವು 10 ರನ್ ಗಳಿಸಿದೆವು. ಇದನ್ನು ಮುಂದುವರೆಸಿದರೆ ನಾವು 200 ರನ್ ಗುರಿಯನ್ನು ದಾಟಬಹುದು ಎಂದು ನಾನು ಆ ಕ್ಷಣದಲ್ಲೇ ನಿರ್ಧರಿಸಿದೆ" ಎಂದಿದ್ದಾರೆ
 
ಗೆಲುವಿನ ಕುರಿತು ಪ್ರತಿಕ್ರಿಯಿಸಿದ ಆರೆಂಜ್ ಕ್ಯಾಪ್ ವಿನ್ನರ್ ರಾಬಿನ್ ಉತ್ತಪ್ಪ "ನನ್ನ ಭಾವನೆಗಳನ್ನು ವ್ಯಕ್ತಪಡಿಸಲಾಗುತ್ತಿಲ್ಲ" ಎಂದು ಹೇಳಿದ್ದಾರೆ
 
"ನನಗಾಗುತ್ತಿರುವ ಸಂತೋಷವನ್ನು ವ್ಯಕ್ತ ಪಡಿಸಲು ಪದಗಳು ಸಿಗುತ್ತಿಲ್ಲ. ತಂಡಕ್ಕೆ ನನ್ನಿಂದಾದಷ್ಟು ಕೊಡುಗೆ ಕೊಟ್ಟಿದ್ದಕ್ಕೆ ನನಗೆ ಸಮಾಧಾನವಿದೆ. ನಾನಾಡಿದ ಇನ್ನಿಂಗ್ಸ್‌ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳ ಬೇಕೆಂದರೆ ಅದು ಮುಂಬೈ ಇಂಡಿಯನ್ಸ್ ವಿರುದ್ಧದ್ದು. ಆ ಪಂದ್ಯದಲ್ಲಿ ನಾನು ಮುರಿದ ಬೆರಳಿನ ಜತೆ ಕಣಕ್ಕಿಳಿದೆ. ಆದರೆ ದೈಹಿಕ ತಡೆಯನ್ನು ನಾನು ಮುರಿದೆ" ಎಂದು ಉತ್ತಪ್ಪಾ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ