ಸನ್‌ರೈಸರ್ಸ್ ವಿರುದ್ಧ ಪಂದ್ಯಕ್ಕೆ ಡೇರ್‌ಡೆವಿಲ್ಸ್ ನಾಯಕ ಪೀಟರ್‌ಸನ್ ಸಿದ್ಧ

ಮಂಗಳವಾರ, 22 ಏಪ್ರಿಲ್ 2014 (19:08 IST)
ನವದೆಹಲಿ: ಡೆಲ್ಲಿ ಡೇರ್‌ಡೆವಿಲ್ಸ್ ನಾಯಕ ಕೆವಿನ್ ಪೀಟರ್‌ಸನ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯಕ್ಕೆ ಚೊಚ್ಚಲ ಪ್ರವೇಶ ಮಾಡಲು ಸಿದ್ಧತೆ ನಡೆಸಿದ್ದಾರೆ. ಮಾಜಿ ಇಂಗ್ಲೆಂಡ್ ಆಟಗಾರನ ಬೆರಳಿಗೆ ಗಾಯವಾಗಿದ್ದರಿಂದ ಡೆಲ್ಲಿ ಡೇರ್‌ಡೆವಿಲ್ಸ್ ಮುಂಚಿನ ಮೂರು ಪಂದ್ಯಗಳಲ್ಲಿ ಆಡಿರಲಿಲ್ಲ.ತಂಡದ ಕೆಟ್ಟ ಆಟದ ಪ್ರದರ್ಶನದ ಬಳಿಕ ನಿರಾಶೆಗೊಳ್ಳದಂತೆ ಅಭಿಮಾನಿಗಳಿಗೆ ಪೀಟರ್‌ಸನ್ ಮನವಿ ಮಾಡಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ನಡೆದ ಹರಾಜಿನಲ್ಲಿ  9 ಕೋಟಿ ರೂ. ಮೊತ್ತವನ್ನು ಪಡೆದಿದ್ದ ಪೀಟರ್‌ಸನ್ ಡಿಡಿ ಆಟಗಾರರಿಗೆ ಟಿಪ್ಸ್ ನೀಡುತ್ತಿದ್ದರು. ನಾವು ಮೊದಲ ಮೂರರಿಂದ ಐದು ಪಂದ್ಯಗಳ ಬಗ್ಗೆ ಚಿಂತೆ ಮಾಡಬೇಕಿಲ್ಲ. 6ರಿಂದ 10ರ ಪಂದ್ಯಗಳವರೆಗೆ ಗೆಲುವಿನ ಸರಣಿ ಮುಂದುವರಿಸಿದರೆ ಉತ್ತಮವಾಗಿ ಪಂದ್ಯಾವಳಿಯನ್ನು ಮುಗಿಸಬಹುದು ಎಂದು ಆಶಾವಾದ ವ್ಯಕ್ತಪಡಿಸಿದರು.
 

ವೆಬ್ದುನಿಯಾವನ್ನು ಓದಿ