ಬಾಯಿಗೆ ಪ್ಲಾಸ್ಟರ್ ಅಂಟಿಸಿಕೊಂಡು ಫೀಲ್ಡಿಂಗ್ ಮಾಡಿದ ಪೋಲಾರ್ಡ್

ಸೋಮವಾರ, 20 ಏಪ್ರಿಲ್ 2015 (17:16 IST)
ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪೋಲಾರ್ಡ್ ಬಾಯಿಗೆ ಪ್ಲಾಸ್ಟರ್ ಅಂಟಿಸಿಕೊಂಡು ಫೀಲ್ಡಿಂಗ್ ಮಾಡುತ್ತಿದ್ದ ದೃಶ್ಯ ನೆರೆದ ಅಭಿಮಾನಿಗಳಲ್ಲಿ ನಗೆಉಕ್ಕಿಸಿತು.

 ಕ್ರಿಸ್ ಗೇಲ್ ಮಾಲಿಂಗ ಅವರ ಬೌಲಿಂಗ್ ಆಡಲು ತಿಣುಕಾಡಿ ಮೇಡಿನ್ ಓವರ್ ಕೊಟ್ಟಿದ್ದರು. ಆಗ ಫೀಲ್ಡಿಂಗ್ ಮಾಡುತ್ತಿದ್ದ ಪೊಲಾರ್ಡ್ ಕ್ರಿಸ್ ಗೇಲ್ ಅವರತ್ತ ಧಾವಿಸಿ ಏನೇನೋ ಪಿಸುಗುಟ್ಟಿದರು.
 
ಅಂಪೈರ್ ವಾರ್ನಿಂಗ್ ಕೊಟ್ಟ ಬಳಿಕವೂ ಮತ್ತೊಮ್ಮೆ ಕ್ರಿಸ್ ಗೇಲ್ ಬಳಿ ಏನೇನೋ ಹೇಳಿದರು. ಇದರಿಂದ ಅಂಪೈರ್ ಸುಮ್ಮನಿರುವಂತೆ ಪೋಲಾರ್ಡ್‌ಗೆ ಮತ್ತೊಮ್ಮೆ ಎಚ್ಚರಿಸಿದಾಗ ಸ್ಲೆಡ್ಜಿಂಗ್ ಕುಖ್ಯಾತಿಗೆ ಹೆಸರಾಗಿದ್ದ ಪೊಲಾರ್ಡ್ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡು ಫೀಲ್ಡಿಂಗ್ ಮಾಡಲಾರಂಭಿಸಿದ್ದು, ಮೈದಾನದಲ್ಲಿದ್ದ ಪ್ರೇಕ್ಷಕರು, ಆಟಗಾರರ ಮುಖದಲ್ಲಿ  ನಗೆ ಮೂಡಿಸಿತು. 

ವೆಬ್ದುನಿಯಾವನ್ನು ಓದಿ