ರಹಾನೆ ತಾಂತ್ರಿಕ ಪರಿಪೂರ್ಣ ಬ್ಯಾಟಿಂಗ್‌ಗೆ ಸಮೀಪ: ವಾಡೇಕರ್

ಶನಿವಾರ, 25 ಏಪ್ರಿಲ್ 2015 (13:15 IST)
ಟೀಂ ಇಂಡಿಯಾ ಆಟಗಾರ ಅಜಿಂಕ್ಯ ರಹಾನೆ ಬಹುಶಃ ಪರಿಪೂರ್ಣ ತಾಂತ್ರಿಕ ಕೌಶಲ್ಯದ ಆಟಕ್ಕೆ ಹತ್ತಿರವಾಗಿದ್ದಾರೆ ಎಂದು ಭಾರತದ ಮಾಜಿ ನಾಯಕ ಅಜಿತ್ ವಾಡೇಕರ್ ಭಾವಿಸಿದ್ದಾರೆ. ಐಪಿಎಲ್‌ನಲ್ಲಿ ತಾಂತ್ರಿಕವಾಗಿ ಸಮರ್ಪಕವಾದ ಬ್ಯಾಟ್ಸ್‌ಮನ್ ಅವರನ್ನು ನೋಡುವುದು ಕಷ್ಟ. ಆದರೆ ಅಜಿಂಕ್ಯಾ ರಹಾನೆ ಈ ಬಗ್ಗೆ ಗಮನಸೆಳೆದಿದ್ದು,  ತಾಂತ್ರಿಕವಾಗಿ ಆಡುವ ಏಕಮಾತ್ರ ಬ್ಯಾಟ್ಸ್‌ಮನ್  ಎಂದು ವಾಡೇಕರ್ ಹೇಳಿದರು.
 
ಅವರು ಟಿ 20 ಕ್ರಿಕೆಟ್ ಹೇಗೆ ಆಡಬೇಕೆಂದು ತಿಳಿದಿದ್ದಾರೆ. ಅವರು ಉತ್ತಮ  ರಕ್ಷಣೆಯ ಮತ್ತು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮನೋಧರ್ಮ ಹೊಂದಿದ್ದಾರೆ ಎಂದು ವಾಡೇಕರ್ ಹೇಳಿದರು. 
 
ಟಿ20 ಮಾದರಿ ಕ್ರಿಕೆಟ್ ಹಿನ್ನೆಲೆಯಲ್ಲಿ ಹಳೆಯ ಶೈಲಿಯ ತಂತ್ರವನ್ನು ಪುನರ್ಪರಿಶೀಲಿಸಬೇಕಾದ ಅಗತ್ಯವಿದೆ ಎಂದು ಇನ್ನೊಬ್ಬರು ಟೆಸ್ಟ್ ಕ್ರಿಕೆಟರ್ ಮಾಧವ್ ಆಪ್ಟೆ ಹೇಳಿದ್ದಾರೆ. 
ತಾಂತ್ರಿಕತೆ ಆಟದಲ್ಲಿ ಮುಖ್ಯವಾಗಿದೆ. ಆದರೆ ಇದು ಸರ್ಕಸ್‌ನಲ್ಲಿ ವಿದೂಷಕನಂತೆ. ಅವನು ಎಲ್ಲಾ ಮೂರ್ಖ ಕೃತ್ಯಗಳನ್ನು ಎಸಗಿದರೂ ಉತ್ತಮ ಪ್ರದರ್ಶನ ನೀಡುತ್ತಾನೆ. ವಿಜಯ್ ಮರ್ಚೆಂಟ್, ವಿನೂ ಮಂಕಡ್ ಅಥವಾ ವಿಜಯ್ ಹಜಾರೆ ಅವರ ಶ್ರೇಷ್ಟ ತಂತ್ರಗಾರಿಕೆ ಈಗ ಪ್ರಸ್ತುತವಾಗದಿರಬಹುದು ಎಂದು ಅವರು ಗಮನಸೆಳೆದರು. 

ವೆಬ್ದುನಿಯಾವನ್ನು ಓದಿ