ಆರ್ ಸಿಬಿಗಾಗಿ ಮದುವೆ ಮುಂದೂಡಿದ್ದ ರಜತ್ ಪಾಟೀದಾರ್

ಗುರುವಾರ, 26 ಮೇ 2022 (17:06 IST)
ಮುಂಬೈ: ಐಪಿಎಲ್ 2022 ರ ಎಲಿಮಿನೇಟರ್ ಪಂದ್ಯದಲ್ಲಿ ಆರ್ ಸಿಬಿ ಪರ ಭರ್ಜರಿ ಶತಕ ಗಳಿಸಿದ್ದ ರಜತ್ ಪಾಟೀದಾರ್ ತಮ್ಮ ಮದುವೆ ಮುಂದೂಡಿದ ವಿಚಾರ ಬೆಳಕಿಗೆ ಬಂದಿದೆ.

ಆರಂಭದಲ್ಲಿ ಹರಾಜಿನಲ್ಲಿ ರಜತ್ ಮಾರಾಟವಾಗದೇ ಉಳಿದಿದ್ದರು. ಹೀಗಾಗಿ ಅವರು ತಮ್ಮ ಮೆಚ್ಚಿನ ಹುಡುಗಿಯೊಂದಿಗೆ ಮೇಯಲ್ಲಿ ಮದುವೆಯಾಗಲು ಎಲ್ಲಾ ತಯಾರಿ ನಡೆಸಿದ್ದರು.

ಆದರೆ ಅನಿರೀಕ್ಷಿತವಾಗಿ ಬದಲಿ ಆಟಗಾರನಾಗಿ ಆರ್ ಸಿಬಿ ತಂಡಕ್ಕೆ ಆಯ್ಕೆಯಾದ ರಜತ್ ಆಡುವ ಬಳಗದಲ್ಲೂ ಅವಕಾಶ ಪಡೆದರು. ಐಪಿಎಲ್ ನಲ್ಲಿ ಸಿಕ್ಕ ಅವಕಾಶ ಮಿಸ್ ಮಾಡಿಕೊಳ್ಳಲು ಇಷ್ಟಪಡದ ರಜತ್ ತಮ್ಮ ಮದುವೆಯನ್ನೇ ಮುಂದೂಡಿದ್ದಾರಂತೆ. ಇದೀಗ ರಜತ್ ಮದುವೆ ಜುಲೈ ತಿಂಗಳಲ್ಲಿ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ