ಸನ್ ರೈಸರ್ಸ್ ವಿರುದ್ಧ ಗೆಲುವಿನ ಗತಿ ಮುಂದುವರಿಸಲು ಆರ್‌ಸಿಬಿ ನಿರ್ಧಾರ

ಸೋಮವಾರ, 13 ಏಪ್ರಿಲ್ 2015 (13:24 IST)
ಕ್ರಿಸ್ ಗೇಲ್‌ನಿಂದ ಸ್ಫೂರ್ತಿ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊಲ್ಕತಾ ನೈಟ್ ರೈಡರ್ಸ್ ವಿರುದ್ಧ ಗೆಲುವು ಗಳಿಸಿ ಶುಭಾರಂಭ ಮಾಡಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಮವಾರ ನಡೆಯುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಚೊಚ್ಚಲ ತವರು ಮೈದಾನದ ಪಂದ್ಯದಲ್ಲಿ ತನ್ನ  ಗೆಲುವಿನ ಗತಿಯನ್ನು ಮುಂದುವರಿಸಲು ಆರ್‌ಸಿಬಿ  ನಿರ್ಧರಿಸಿತು. 
 
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿರುವ ಸನ್‌ ರೈಸರ್ಸ್‌‍ಗೆ ಈ ಪಂದ್ಯವನ್ನು ತಮ್ಮ ಅಭಿಯಾನವನ್ನು ಹಳಿಯ ಮೇಲೆ ತರಲು ಅವಕಾಶ ಒದಗಿಸುತ್ತದೆ. 
ಆರ್‌ಸಿಬಿಯ ಬೌಲಿಂಗ್ ಪ್ರಯತ್ನ ನಿರೀಕ್ಷಿತ ಮಟ್ಟದಲ್ಲಿಲ್ಲದಿದ್ದರೂ, ಆರ್‌ಸಿಬಿ ಕೆಕೆಆರ್ ವಿರುದ್ಧ ಕ್ರಿಸ್ ಗೇಲ್ ಅವರ ಸ್ಫೋಟಕ 96 ರನ್ ನೆರವಿನಿಂದ ಗೆಲುವು ಗಳಿಸಿತ್ತು. 
ಸನ್ ರೈಸರ್ಸ್ ನಾಯಕರಾಗಿರುವ ಡೇವಿಡ್ ವಾರ್ನರ್ ತಂಡದ ಫೀಲ್ಡಿಂಗ್ ಬಗ್ಗೆ ಅತೃಪ್ತರಾಗಿದ್ದಾರೆ. ಅನೇಕ ರನ್ ಔಟ್‌ ಅವಕಾಶಗಳನ್ನು ಸನ್ ರೈಸರ್ಸ್  ಕೈಚೆಲ್ಲಿತ್ತು.

 ಬೌಲಿಂಗ್ ಕೂಡ ಅಶಿಸ್ತಿನಿಂದ ಕೂಡಿದ್ದು, ನಾಯಕನನ್ನು ಹೊರತುಪಡಿಸಿದರೆ ಬ್ಯಾಟ್ಸ್‌ಮನ್‌ಗಳು ತಮ್ಮ ಉಪಸ್ಥಿತಿಯನ್ನು ತೋರಿಸಲಿಲ್ಲ.  ಆತಿಥೇಯ ತಂಡ ಆರ್‌ಸಿಬಿ ವಿರುದ್ಧ ಹೋರಾಟದಲ್ಲಿ ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ವಾರ್ನರ್ ಬಯಸಿದ್ದಾರೆ. 
 
ಆರ್‍‌ಸಿಬಿ ಸಂಭವನೀಯ ತಂಡ:  ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ದಿನೇಶ್ ಕಾರ್ತಿಕ್, ಮಂದೀಪ್ ಸಿಂಗ್, ಎಬಿ ಡಿವಿಲಿಯರ್ಸ್, ಡರೆನ್ ಸಾಮಿ, ಸೀನ್ ಅಬಾಟ್, ಹರ್ಷಲ್ ಪಟೇಲ್, ಅಬು ನೆಚಿಮ್, ಯಜುವೇಂದ್ರ ಚಾಹಲ್, ವರುಣ್ ಆರಾನ್.
 
ಸನ್ ರೈಸರ್ಸ್ ಸಂಭವನೀಯ ಪಟ್ಟಿ: 
ಡೇವಿಡ್ ವಾರ್ನರ್ (ನಾಯಕ), ಶಿಖರ್ ಧವನ್, ಕೇನ್ ವಿಲಿಯಮ್ಸನ್, ನಮನ್ ಓಝಾ (ವಿಕಿ), ರವಿ ಬೊಪಾರ, ಲೋಕೇಶ್ ರಾಹುಲ್, ಲಕ್ಷ್ಮೀ ರತನ್ ಶುಕ್ಲಾ / ಪರ್ವೇಜ್ ರಸೂಲ್, ಕರಣ್ ಶರ್ಮ, ಭುವನೇಶ್ವರ್ ಕುಮಾರ್, ಪ್ರವೀಣ್ ಕುಮಾರ ,  ಇಶಾಂತ್ ಶರ್ಮಾ, ಟ್ರೆಂಟ್ ಬೌಲ್ಟ್
 

ವೆಬ್ದುನಿಯಾವನ್ನು ಓದಿ