ಐಪಿಎಲ್ ಸೀಸನ್ 7 ಪಂದ್ಯಾವಳಿಯಲ್ಲಿ ಆರ್‌ಸಿಬಿಗೆ ಸತ್ವಪರೀಕ್ಷೆ

ಸೋಮವಾರ, 28 ಏಪ್ರಿಲ್ 2014 (18:14 IST)
ದುಬೈ: ಐಪಿಎಲ್  ಸೀಸನ್ 7 ಪಂದ್ಯಾವಳಿಯಲ್ಲಿ ತಮ್ಮ ತಂಡವನ್ನು ಪುನಃ ಹಳಿ ಮೇಲೆ ತರುವ ಆಶಯ ಹೊಂದಿರುವ ರಾಯಲ್ ಚಾಲೆಂಜರ್ಸ್  ದುಬೈನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಕಠಿಣ ಹೋರಾಟವನ್ನು ಇಂದು ಎದುರಿಸಬೇಕಾಗಿದೆ.

ನಾಲ್ಕು ಪಂದ್ಯಗಳಲ್ಲೂ ಜಯಗಳಿಸಿರುವ ಕಿಂಗ್ಸ್ ಇಲೆವನ್ ಪಂಜಾಬ್ ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು ಇನ್ನೂ ನಾಲ್ಕು ಪಂದ್ಯಗಳನ್ನು ಗೆಲ್ಲಬೇಕಿದ್ದು, ಅವರು ಗೆಲ್ಲುವ ಎಲ್ಲ ಲಕ್ಷಣಗಳು ಗೋಚರಿಸಿವೆ. ಕಿಂಗ್ಸ್ ಇಲೆವನ್ ತನ್ನ ಮೊದಲ ಎರಡು ಪಂದ್ಯಗಳಲ್ಲಿ 396 ರನ್ ನೀಡಿದ ಬಳಿಕ ಅದರ ಬೌಲಿಂಗ್ ವಿಭಾಗದಲ್ಲಿ ಗಣನೀಯ ಸುಧಾರಣೆಯಾಗಿದ್ದು, ಇನ್ನೆರಡು ಪಂದ್ಯಗಳಲ್ಲಿ  230 ರನ್‌ಗಳನ್ನು ಮಾತ್ರ ನೀಡಿದೆ.
 
ಕಿಂಗ್ಸ್ ಇಲೆವನ್ ಪರ ಸಂಭವನೀಯ ಆಟಗಾರರು: ಚೇತೇಶ್ವರ ಪೂಜಾರ, ವೀರೇಂದ್ರ ಸೆಹ್ವಾಗ್, ಮ್ಯಾಕ್ಸ್‌ವೆಲ್ಸ ಡೇವಿಡ್ ಮಿಲ್ಲರ್, ಜಾರ್ಜ್ ಬೈಲಿ, ಅಕ್ಷರ್ ಪಟೇಲ್, ವೃದ್ದಿಮ್ಯಾನ್ ಸಹಾ, ಜಾನ್ಸನ್, ರಿಷಿ ಧವನ್, ಬಾಲಾಜಿ ಮತ್ತು ಸಂದೀಪ್ ಶರ್ಮಾ.ರಾಯಲ್ ಚಾಲೆಂಜರ್ಸ್ ತಂಡ ಕೆಕೆಆರ್ ವಿರುದ್ಧ ಆಘಾತಕಾರಿ ಸೋಲಿನ ಬೆನ್ನಹಿಂದೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಅನಿರೀಕ್ಷಿತ ಶರಣಾಗತಿಯಿಂದ ಆರ್‌ಸಿಬಿಯ ಬ್ಯಾಟಿಂಗ್ ಕೌಶಲದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಆರ್‌ಸಿಬಿ 15 ಓವರುಗಳಲ್ಲಿ 70 ರನ್‌ಗಳಿಗೆ ಔಟಾಗುವ ಮೂಲಕ ನೀರಸ ಪ್ರದರ್ಶನ ನೀಡಿತ್ತು.
 
ಯುವರಾಜ್ ಸಿಂಗ್, ಕೊಹ್ಲಿ, ಡೆ ವಿಲಿಯರ್ಸ್ ಮುಂತಾದ ಅಗ್ರಮಾನ್ಯ ಆಟಗಾರರು ಇದ್ದರೂ  ನಾಲ್ಕು ಪಂದ್ಯಗಳಲ್ಲಿ ಪಾರ್ಥಿವ್ ಪಟೇಲ್ 116 ರನ್‌ಗಳೊಂದಿಗೆ  ಅಗ್ರಮಾನ್ಯ  ಸ್ಕೋರರ್ ಎನಿಸಿದ್ದಾರೆ.ಬೆನ್ನು ನೋವಿನಿಂದ ಕ್ರಿಸ್ ಗೇಲ್ ಅನುಪಸ್ಥಿತಿ ಕೂಡ ತಂಡಕ್ಕೆ ಪೆಟ್ಟು ಬಿದ್ದಿದೆ. ಸಂಭವನೀಯರು ಪಾರ್ಥಿವ್ ಪಟೇಲ್, ಟಕಾವಲೆ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಡಿ ವಿಲಿಯರ್ಸ್, ಮಾರ್ಕೆಲ್, ಮಿಚೆಲ್ ಸ್ಟಾರ್ಕ್, ವರುಣ್ ಆರಾನ್, ಅಶೋಕ್ ದಿಂಡಾ, ರವಿ ರಾಂಪಾಲ್, ಚಾಹಾಲ್. 

ವೆಬ್ದುನಿಯಾವನ್ನು ಓದಿ