ಮಂದೀಪ್ ಸಿಂಗ್ ಅಬ್ಬರದ 45 ರನ್ : ಕೆಕೆಆರ್ ವಿರುದ್ಧ ಆರ್‌ಸಿಬಿಗೆ ಜಯ

ಶನಿವಾರ, 2 ಮೇ 2015 (20:58 IST)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತಾ ನೈಟ್ ರೈಡರ್ಸ್ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್  ನಿಗದಿತ 10 ಓವರುಗಳಲ್ಲಿ 111 ರನ್‌ಗೆ ಉತ್ತರವಾಗಿ ರಾಯಲ್ ಚಾಲೆಂಜರ್ಸ್ 9.4 ಓವರುಗಳಲ್ಲಿ 3 ವಿಕೆಟ್ ಕಳೆದುಕೊಂಡು 115 ರನ್ ಗಳಿಸುವ  ಮೂಲಕ ವಿಜಯದುಂದುಭಿ ಮೊಳಗಿಸಿದೆ.  ಆರ್‌ಸಿಬಿ ಪರ ಮಂದೀಪ್ ಸಿಂಗ್ ಅದ್ಭುತ ಆಟವನ್ನು ಪ್ರದರ್ಶಿಸಿ 18 ಎಸೆತಗಳಲ್ಲಿ 45 ರನ್ ಬಾರಿಸುವ ಮೂಲಕ ತಂಡಕ್ಕೆ ವಿಜಯವನ್ನು ತಂದಿತ್ತರು.

ಅವರ ಸ್ಕೋರಿನಲ್ಲಿ  3 ಸಿಕ್ಸರುಗಳು ಮತ್ತು 4 ಬೌಂಡರಿಗಳಿದ್ದವು. ಕೊನೆಯ 4 ಎಸೆತಗಳಲ್ಲಿ ಆರ್‌‌‍ಸಿಬಿಗೆ 9 ರನ್ ಅಗತ್ಯವಿತ್ತು. ಮಂದೀಪ್ ಸಿಂಗ್ ಒಂದು ಸಿಕ್ಸರ್ ಮತ್ತು ನಂತರ ಎಸೆತದಲ್ಲಿ ಒಂದು ಬೌಂಡರಿ ಬಾರಿಸಿ ಆರ್‌ಸಿಬಿಗೆ ವಿಜಯವನ್ನು ತಂದಿತ್ತರು.  ಆರಂಭದಲ್ಲಿ ಕ್ರಿಸ್ ಗೇಲ್ ಮತ್ತು ವಿರಾಟ್ ಕೊಹ್ಲಿ 48 ರನ್ ಜೊತೆಯಾಟವಾಡಿದರು. ಗೇಲ್ 21 ರನ್ ಸ್ಕೋರಿನಲ್ಲಿ 3 ಸಿಕ್ಸರ್‌ಗಳಿದ್ದವು. ಗೇಲ್ ಹಾಗ್ ಬೌಲಿಂಗ್‌ನಲ್ಲಿ ರಸೆಲ್‌ಗೆ ಕ್ಯಾಚಿತ್ತು ಔಟಾದರು.

ವಿರಾಟ್ ಕೊಹ್ಲಿ 34 ರನ್ ಸ್ಕೋರಿನಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿಗಳಿದ್ದವು.  ತಂಡದ ಸ್ಕೋರು 81 ರನ್‌ಗಳಿದ್ದಾಗ ಕೊಹ್ಲಿ ರಸೆಲ್‌ ಎಸೆತದಲ್ಲಿ ಯಾದವ್‌ಗೆ ಕ್ಯಾಚಿತ್ತು ಔಟಾದರು.  ಕೊನೆಯ 4 ಎಸೆತಗಳಲ್ಲಿ ಆರ್‌ಸಿಬಿಗೆ 9 ರನ್ ಅಗತ್ಯವಿತ್ತು. ರಸೆಲ್ ಬೌಲಿಂಗ್‌ನಲ್ಲಿ ಮಂದೀಪ್ ಸಿಂಗ್ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸುವ ಮೂಲಕ ಆರ್‌ಸಿಬಿ ರೋಚಕ ಗೆಲುವು ಗಳಿಸಿತು.

 ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ನೈಟ್ ರೈಡರ್ಸ್ ಪರ 17 ಎಸೆತಗಳಲ್ಲಿ ಮಿಂಚಿನ 45 ರನ್‌ಗಳನ್ನು ಆಂಡ್ರೆ ರಸೆಲ್ ಗಳಿಸಿದ್ದರು. ಆರ್‌ಸಿಬಿ ಪರ ಮಿಶೆಲ್ ಸ್ಟಾರ್ಕ್, ಡೇವಿಡ್ ವೈಸ್ ಮತ್ತು ಚಾಹಲ್ ತಲಾ ಒಂದು ವಿಕೆಟ್ ಕಬಳಿಸಿದರು. ಮಳೆರಾಯನ ಕಾಟದಿಂದ ಪಂದ್ಯವು ತಡವಾಗಿ ಆರಂಭವಾಗಿ 10 ಓವರುಗಳಿಗೆ ಪಂದ್ಯವನ್ನು ಮೊಟಕುಗೊಳಿಸಲಾಯಿತು. 

ವೆಬ್ದುನಿಯಾವನ್ನು ಓದಿ