ರಿಷಬ್ ಪಂತ್ ಪ್ರಮಾದದಿಂದ ಗೆದ್ದ ಮುಂಬೈ: ನೆಟ್ಟಿಗರಿಂದ ಭಾರೀ ಟೀಕೆ

ಭಾನುವಾರ, 22 ಮೇ 2022 (09:57 IST)
ಮುಂಬೈ: ಐಪಿಎಲ್ 2022 ರಲ್ಲಿ ನಿನ್ನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿಗೆ ಡೆಲ್ಲಿ ನಾಯಕ ರಿಷಬ್ ಪಂತ್ ಮಾಡಿದ ಪ್ರಮಾದವೊಂದು ಕಾರಣವಾಯ್ತು.

ಮುಂಬೈಗೆ ಕೊನೆಯ ಹಂತದಲ್ಲಿ 11 ಎಸೆತಗಳಿಂದ 34 ರನ್ ಚಚ್ಚಿ ಟಿಮ್ ಡೇವಿಡ್ ಗೆಲುವು ಕೊಡಿಸಿದ್ದರು. ಆದರೆ ಟಿಮ್ ಡೇವಿಡ್ ಇಷ್ಟು ಬೆಳೆಯಲು ಕಾರಣವಾಗಿದ್ದು ರಿಷಬ್ ಪಂತ್ ಮಾಡಿದ ತಪ್ಪು.

9 ಎಸೆತ ಎದುರಿಸಿದ್ದ ಸಂದರ್ಭದಲ್ಲಿ ಶ್ರಾದ್ಧೂಲ್ ಠಾಕೂರ್ ಬೌಲಿಂಗ್ ನಲ್ಲಿ ಟಿಮ್ ಡೇವಿಡ್ ಕಾಟ್ ಬಿಹೈಂಡ್‍ ಆಗಿದ್ದರು. ಅಂಪಾಯರ್ ಔಟ್ ಕೊಟ್ಟಿರಲಿಲ್ಲ. ಅತ್ತ ರಿಷಬ್ ಕೂಡಾ ಡಿಆರ್ ಎಸ್ ಗೆ ಮನವಿ ಸಲ್ಲಿಸದೇ ಪ್ರಮಾದವೆಸಗಿದರು. ಅವರ ಈ ತಪ್ಪಿಗೆ ಡೆಲ್ಲಿ ತಕ್ಕ ಬೆಲೆ ತೆರಬೇಕಾಯ್ತು. ಇದರಿಂದಾಗಿ ನೆಟ್ಟಿಗರು ಅವರನ್ನು ಇನ್ನಿಲ್ಲದಂತೆ ಟೀಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ