ನಿಧಾನಗತಿಯ ಬೌಲಿಂಗ್: ರೋಹಿತ್ ಶರ್ಮಾಗೆ 12 ಲಕ್ಷ ರೂ. ದಂಡ

ಮಂಗಳವಾರ, 21 ಏಪ್ರಿಲ್ 2015 (14:56 IST)
ರಾಯಲ್ ಚಾಲೆಂಜರ್ಸ್ ವಿರುದ್ಧ ಪಂದ್ಯದಲ್ಲಿ ನಿಧಾನ ಗತಿಯಲ್ಲಿ ಮುಂಬೈ ಇಂಡಿಯನ್ಸ್ ಬೌಲಿಂಗ್ ಮಾಡಿರುವ ಬಗ್ಗೆ ನಾಯಕ ರೋಹಿತ್ ಶರ್ಮಾ ಅವರಿಗೆ ದಂಡ ವಿಧಿಸಲಾಗಿದೆ. ರಾಯಲ್ ಚಾಲೆಂಜರ್ಸ್ ವಿರುದ್ಧ ಮುಂಬೈ 18 ರನ್‌ಗಳಿಂದ ಈ ಪಂದ್ಯದಲ್ಲಿ ಜಯಗಳಿಸಿತ್ತು. ಮುಂಬೈ ಇಂಡಿಯನ್ಸ್ ಬೃಹತ್ ಮೊತ್ತವನ್ನು ಮುಟ್ಟಲು ಬೆಂಗಳೂರು ವಿಫಲವಾಗಿತ್ತು. 

ಪಂದ್ಯಾವಳಿಯ ನೀತಿ ಸಂಹಿತೆಯ ಅಡಿಯಲ್ಲಿ ಇದು ರೋಹಿತ್ ಅವರ ಐಪಿಎಲ್ 2015ರ ಪ್ರಥಮ ತಪ್ಪಾಗಿರುವ ಹಿನ್ನೆಲೆಯಲ್ಲಿ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಸೋಮವಾರ ತಿಳಿಸಿದೆ.

ಮುಂಬೈ ಇಂಡಿಯನ್ಸ್ ಪ್ರಸಕ್ತ ಪಂದ್ಯಾವಳಿಯಲ್ಲಿ 2 ಪಾಯಿಂಟ್‌ಗಳಿಂದ ಏಳನೇ ಸ್ಥಾನದಲ್ಲಿದ್ದು ರಾಯಲ್ಸ್ ಚಾಲೆಂಜರ್ಸ್ ತಂಡಕ್ಕಿಂತ ಮುಂದಿದ್ದಾರೆ. 

ವೆಬ್ದುನಿಯಾವನ್ನು ಓದಿ