ಮುಂಬೈ ಸತತ ಆರನೇ ಸೋಲುಂಡ ಬಳಿಕ ಎಲ್ಲಾ ಹೊಣೆ ನನ್ನದು ಎಂದ ರೋಹಿತ್ ಶರ್ಮಾ
ನಿನ್ನೆಯ ಪಂದ್ಯದಲ್ಲೂ ರೋಹಿತ್ ಮತ್ತೆ 6 ರನ್ ಗಳಿಗೆ ಔಟಾಗಿ ಕಳಪೆ ಫಾರ್ಮ್ ಮುಂದುವರಿಸಿದ್ದರು. ಇದರೊಂದಿಗೆ ಮುಂಬೈ ದಾಖಲೆಯ ಸತತ 6 ಪಂದ್ಯ ಸೋತಂತಾಗಿದೆ.
ನಾನೇನು ತಪ್ಪು ಮಾಡುತ್ತಿದ್ದೇನೆ ಎಂದು ಗೊತ್ತಾದರೆ ತಿದ್ದಿಕೊಳ್ಳಬಹುದು. ಆದರೆ ಪ್ರತೀ ಪಂದ್ಯಕ್ಕೆ ತಯಾರಾಗುವಂತೆ ಈಗಲೂ ತಯಾರಾಗುತ್ತೇನೆ. ಹಾಗಿದ್ದರೂ ಯಾವುದೂ ನಮ್ಮ ಪರವಾಗಿ ಬರುತ್ತಿಲ್ಲ. ತಂಡ ನನ್ನಿಂದ ಏನು ನಿರೀಕ್ಷಿಸುತ್ತದೋ ಆ ಸ್ಥಾನಕ್ಕೆ ಕೊಂಡೊಯ್ಯಲಾಗದಿದ್ದಕ್ಕೆ ನಾನೇ ಈ ಎಲ್ಲಾ ಸೋಲಿನ ಹೊಣೆ ಹೊರುತ್ತೇನೆ. ಮುಂದಿನ ಪಂದ್ಯಗಳತ್ತ ಗಮನಹರಿಸುತ್ತೇವೆ ಎಂದು ರೋಹಿತ್ ಹೇಳಿದ್ದಾರೆ.