ನಾಕ್‌ಔಟ್ ಹೋರಾಟದಲ್ಲಿ ರಾಜಸ್ಥಾನ ರಾಯಲ್ಸ್, ರಾಯಲ್ ಚಾಲೆಂಜರ್ಸ್

ಬುಧವಾರ, 20 ಮೇ 2015 (17:10 IST)
ಕೊನೆ ಕ್ಷಣದಲ್ಲಿ ಪ್ಲೇಆಫ್ ಪ್ರವೇಶ ಮಾಡಿದ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ನಡುವೆ ನಾಕ್‌ಔಟ್ ಹಣಾಹಣಿ ಬುಧವಾರ ಪುಣೆಯಲ್ಲಿ ನಡೆಯಲಿದೆ.  ಸ್ಟೀವ್ ಸ್ಮಿತ್ ನೇತೃತ್ವದ ತಂಡವು  ಲೀಗ್ ಕೊನೆಯಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಅಂತಿಮ ನಾಲ್ಕು ತಂಡಗಳ ಸಾಲಿನಲ್ಲಿ ಸೇರ್ಪಡೆಯಾಯಿತು. 
 
ಆಸ್ಟ್ರೇಲಿಯಾದ ಓಪನರ್ ಶೇನ್ ವಾಟ್ಸನ್ ಲೀಗ್ ಅಂತಿಮ ಪಂದ್ಯದಲ್ಲಿ ಅಜೇಯ 104ರನ್ ಬಾರಿಸುವ ಮೂಲಕ ಕೊಲ್ಕತ್ತಾ ತಂಡವನ್ನು ಸ್ಪರ್ಧೆಯಿಂದ ಹೊರಗಟ್ಟಿದರು.
ಆರಂಭಿಕ ಆಟಗಾರ ಅಜಿಂಕ್ಯ ರಹಾನೆ ಟಾಪ್ ಫಾರಂನಲ್ಲಿದ್ದು, 13 ಆಟಗಳಿಂದ 498 ರನ್ ಕಲೆ ಹಾಕಿದ್ದು, ಡೇವಿಡ್ ವಾರ್ನರ್ ಅವರಿಂದ ಆರೆಂಜ್ ಕ್ಯಾಪ್ ಪಡೆದುಕೊಳ್ಳುವ ಅವಕಾಶ ಹೆಚ್ಚಿದೆ.  ಆಸ್ಟ್ರೇಲಿಯಾದ ಜೇಮ್ಸ್ ಫಾಲ್ಕನರ್ ಆಲ್ ರೌಂಡರ್ ಪಾತ್ರವನ್ನು ಪರಿಪೂರ್ಣವಾಗಿ ನಿರ್ವಹಿಸಿದ್ದಾರೆ.  ದಕ್ಷಿಣ ಆಫ್ರಿಕಾದ ಮೀಡಿಯಂ ಪೇಸರ್ ಕ್ರಿಸ್ ಮಾರಿಸ್ ಬೌಲಿಂಗ್  ದಾಳಿಯ ನೇತೃತ್ವ ವಹಿಸಿದ್ದಾರೆ. 
 
ಆರ್‌ಸಿಬಿ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದು ರಾಯಲ್ಸ್‌ನಷ್ಟೇ ಪಾಯಿಂಟ್ ಗಳಿಸಿದ್ದರೂ ರನ್ ರೇಟ್‌ನಲ್ಲಿ ಮುಂದಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಅವರ ಜಯ ಶ್ರೇಷ್ಠ ದರ್ಜೆಯಿಂದ ಕೂಡಿದ್ದು, ಎಬಿ ಡಿವಿಲಿಯರ್ಸ್ ಅಜೇಯ 133 ರನ್ ಗಳಿಸಿದ್ದರು. 
 
 ಕ್ರಿಸ್ ಗೇಲ್ ಮತ್ತೊಮ್ಮೆ ತಮ್ಮ ಸ್ಫೋಟಕ ಆಟದ ಮೂಲಕ ಕೊಹ್ಲಿ ಜೊತೆಗೆ ವಿನಾಶಕಾರಿ ಓಪನಿಂಗ್ ಜೋಡಿಯಾಗಿದ್ದಾರೆ. ಗೇಲ್, ಕೊಹ್ಲಿ ಮತ್ತು ಡಿ ವಿಲಿಯರ್ಸ್ ಟಾಪ್ ಟೆನ್ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಏನೂ ಆಶ್ಚರ್ಯವಿಲ್ಲ.  

ಮಿಚೆಲ್ ಸ್ಟಾರ್ಕ್, ಡೇವಿಡ್ ವೈಸ್, ಚಾಹಲ್ ಬೌಲಿಂಗ್ ದಾಳಿಯು ಪರಿಣಾಮಕಾರಿಯಾಗಿದೆ. ಆದರೆ ನಾಕ್ ಔಟ್ ಆಟದಲ್ಲಿ ಇದೊಂದು ದಾಖಲೆ ಅಥವಾ ಫಾರಂಗಿಂತ ಮನೋಸ್ಥೈರ್ಯದ ಪ್ರದರ್ಶನವಾಗಿದ್ದು, ಎಲಿಮಿನಿನೇಟರ್ ಎರಡೂ ತಂಡಗಳ ನಿಜವಾದ ಲಕ್ಷಣವನ್ನು ಪರೀಕ್ಷೆ ಮಾಡುತ್ತದೆ.  ಬುಧವಾರದ ಆಟದಲ್ಲಿ ಸೋತವರು ನಿರ್ಗಮಿಸುತ್ತಾರೆ ಮತ್ತು ವಿಜೇತರು ಫೈನಲ್ ಪ್ರವೇಶಕ್ಕೆ ಎರಡನೇ ಕ್ವಾಲಿಫೈಯರ್ ಪಂದ್ಯವನ್ನು  ಚೆನ್ನೈ ವಿರುದ್ಧ ಆಡಬೇಕಾಗುತ್ತದೆ. 

ವೆಬ್ದುನಿಯಾವನ್ನು ಓದಿ