ವಿಕೆಟ್ ನಷ್ಟವಿಲ್ಲದೇ ಡೆಲ್ಲಿಯ ಸ್ಕೋರ್ ಗುರಿ ಮುಟ್ಟಿದ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಗೆಲುವು

ಸೋಮವಾರ, 27 ಏಪ್ರಿಲ್ 2015 (11:00 IST)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ನಡುವೆ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್‌ನ ಅತೀ  ಕಡಿಮೆ ಸ್ಕೋರಾದ 95 ರನ್ ಬೆನ್ನೆತ್ತಿದ ಬೆಂಗಳೂರು ಯಾವುದೇ ವಿಕೆಟ್ ನಷ್ಟವಿಲ್ಲದೇ ಗುರಿಯನ್ನು ಮುಟ್ಟಿದ ಸಾಧನೆ ಮಾಡಿದೆ.   ವರುಣ್ ಆರಾನ್ ಮತ್ತು ಮಿಚೆಲ್ ಸ್ಟಾರ್ಕ್ ಅವರ ಮಾರಕ ಬೌಲಿಂಗ್ ದಾಳಿಯಿಂದ ಡೇರ್ ಡೆವಿಲ್ಸ್ ಬೇಗನೇ ವಿಕೆಟ್‍‌ಗಳನ್ನು ಕಳೆದುಕೊಂಡಿತು.

ನಂತರ  ವಿರಾಟ್ ಕೊಹ್ಲಿ ಅವರು 23 ಎಸೆತಗಳಲ್ಲಿ ಅಜೇಯ 35 ಮತ್ತು ಕ್ರಿಸ್  ಗೇಲ್ 40 ಎಸೆತಗಳಲ್ಲಿ ಅಬ್ಬರದ ಅಜೇಯ 62 ರನ್ ನೆರವಿನಿಂದ  ಬೆಂಗಳೂರು ತನ್ನ ಗೆಲುವಿನ ಸರಣಿಯನ್ನು ಮುಂದುವರಿಸಿತು.
 
 ಸತತ  ಮೂರು ಸೋಲುಗಳಿಂದ ಕಂಗಾಲಾಗಿದ್ದ ಬೆಂಗಳೂರು  ರಾಜಸ್ಥಾನ ರಾಯಲ್ಸ್  ವಿರುದ್ಧ ಗೆದ್ದ ನಂತರ ಆತ್ಮಸ್ಥೈರ್ಯ ಹೆಚ್ಚಿದೆ. ಕ್ರಿಸ್ ಗೇಲ್  ಆರಂಭದಲ್ಲೇ ಅಬ್ಬರದ ಆಟಕ್ಕಿಳಿದು ತಮ್ಮ ಸ್ಕೋರಿನಲ್ಲಿ 4 ಸಿಕ್ಸರ್ ಮತ್ತು 6 ಬೌಂಡರಿಗಳನ್ನು ಬಾರಿಸಿದರು.

ವಿರಾಟ್ ಕೊಹ್ಲಿ 6 ಬೌಂಡರಿಗಳನ್ನು ಬಾರಿಸಿದರು. ಡೆಲ್ಲಿ ಪರ ಶ್ರೇಷ್ಟ ಸ್ಪಿನ್ನರ್‌ಗಳು ಮೊನಚಿನ ಬೌಲಿಂಗ್ ಮಾಡಲಿಲ್ಲ. ತಾಹಿರ್  ಅವರು 2 ಓವರುಗಳಲ್ಲಿ 20 ರನ್ ನೀಡಿದರೆ ಅಮಿತ್  ಮಿಶ್ರಾ 2 ಓವರುಗಳಲ್ಲಿ  25 ರನ್ ನೀಡಿದರು.

ವೆಬ್ದುನಿಯಾವನ್ನು ಓದಿ