ಸನ್‌ರೈಸರ್ಸ್ ರನ್ ಚೇಸ್‌ನಲ್ಲಿ ವಿಫಲ: ಮುಂಬೈ ಇಂಡಿಯನ್ಸ್‌ಗೆ ಜಯ

ಶನಿವಾರ, 25 ಏಪ್ರಿಲ್ 2015 (19:38 IST)
ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದ ಐಪಿಎಲ್ 23ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸಾಧಾರಣ ಮೊತ್ತವಾದ 157 ರನ್ ಬೆನ್ನೆತ್ತಿದ ಸನ್‌ರೈಸರ್ಸ್ ತಂಡದ ಪರ ಶಿಖರ್ ಧವನ್ ಅವರ ಬಿರುಸಿನ 29 ಎಸೆತಕ್ಕೆ 42 ರನ್ ಮತ್ತು ರವಿ ಬೊಪಾರಾ ಅವರ  27 ಎಸೆತಗಳಿಗೆ  23 ರನ್ ವ್ಯರ್ಥವಾಗಿ ಸೋಲಪ್ಪಿತು.  ಮುಂಬೈನ ಲಸಿತ್ ಮಾಲಿಂಗಾ ಮಾರಕ ಬೌಲಿಂಗ್ ದಾಳಿಯಿಂದ  4 ವಿಕೆಟ್ ಕಬಳಿಸಿದ್ದರಿಂದ ಮುಂಬೈನ ರನ್ ಗುರಿ ಮುಟ್ಟಲು ಸನ್‌ರೈಸರ್ಸ್ ವಿಫಲವಾಯಿತು. 

ರವಿ ಬೊಪಾರಾ ಮೆಕ್ ಕ್ಲಿನಗನ್ ಬೌಲಿಂಗ್‌ನಲ್ಲಿ ಪಾಂಡ್ಯಾಗೆ ಕ್ಯಾಚಿತ್ತು ಔಟಾದರು. ಸನ್‌ರೈಸರ್ಸ್‌ಗೆ ಕೊನೆಯ ಓವರಿನಲ್ಲಿ 30 ರನ್ ಅಗತ್ಯವಾಗಿತ್ತು. ಆದರೆ ಕೇವಲ 10 ರನ್ ಮಾಡಿದ್ದರಿಂದ ಮುಂಬೈ 20 ರನ್ ಅಂತರದಿಂದ ಗೆಲುವು ಗಳಿಸಿತು. ಮುಂಬೈ ಪರ ಲಸಿತ್ ಮಾಲಿಂಗಾ 23 ರನ್ ನೀಡಿ 4 ವಿಕೆಟ್ ಕಬಳಿಸಿದರು ಮತ್ತು ಮೆಕ್ ಕ್ಲೆನಾಗನ್  20 ರನ್ ನೀಡಿ 3 ವಿಕೆಟ್ ಕಬಳಿಸಿದರು.
 
 ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಪರ ಲೆಂಡ್ಲ್ ಸಿಮ್ಮನ್ಸ್ 42 ಎಸೆತಗಳಲ್ಲಿ 51 ರನ್ ಹೊಡೆದು ಉತ್ತಮ ಅಡಿಪಾಯ ಹಾಕಿದರು. ಅವರ ಸ್ಕೋರಿನಲ್ಲಿ 6 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಇತ್ತು. ರೋಹಿತ್ ಶರ್ಮಾ 15 ಎಸೆತಗಳಲ್ಲಿ 24 ರನ್ ಹೊಡೆದರಾದರೂ ಕರಣ್ ಶರ್ಮಾ ಎಸೆತದಲ್ಲಿ ಭುವನೇಶ್ವರ್‌ಗೆ ಕ್ಯಾಚಿತ್ತು ಔಟಾದರು.  

ಸಪೋಲಾರ್ಡ್ 33 ರನ್ ಹೊಡೆದು ಭುವನೇಶ್ವರ್‌ಗೆ ಬೌಲ್ಡ್ ಆದ ನಂತರ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್‌ಗಳು ಒಬ್ಬರ ಹಿಂದೊಬ್ಬರು ಪೆವಿಲಿಯನ್ ಹಾದಿ ಹಿಡಿದು  20 ಓವರುಗಳಲ್ಲಿ 157 ರನ್ ಸಾಧಾರಣ ಮೊತ್ತ ಗಳಿಸಲು ಸಾಧ್ಯವಾಗಿತ್ತು. ಸನ್‌ರೈಸರ್ಸ್ ಪರ ಭುವನೇಶ್ವರ್ ಕುಮಾರ್ ಉತ್ತಮ ಬೌಲಿಂಗ್ ದಾಳಿ ಮೂಲಕ 3 ವಿಕೆಟ್ ಕಬಳಿಸಿದರೆ, ಡೇಲ್ ಸ್ಟೇನ್ ಮತ್ತು ಪ್ರವೀಣ್ ಕುಮಾರ್ ತಲಾ 2 ವಿಕೆಟ್ ಗಳಿಸಿದರು. 

ವೆಬ್ದುನಿಯಾವನ್ನು ಓದಿ