ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಹಣಾಹಣಿ

ಶನಿವಾರ, 18 ಏಪ್ರಿಲ್ 2015 (16:52 IST)
ಸನ್‌ರೈಸರ್ಸ್ ಹೈದರಾಬಾದ್ ವಿಶಾಖಪಟ್ನಂನಲ್ಲಿ ಶನಿವಾರ ನಡೆಯುವ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್‌ ವಿರುದ್ಧ ಆಡಲಿದೆ. ಎರಡೂ ತಂಡಗಳು ತಮ್ಮ ತವರು ಪ್ರತಿಭೆಗಳ ಮೇಲೆ ಅವಲಂಬಿತವಾಗಿದ್ದು, ಸನ್‌ರೈಸರ್ಸ್ ಹೈದರಾಬಾದ್ ತಮ್ಮ ಪೇಸ್ ದಾಳಿಯತ್ತ ಗಮನಹರಿಸಿದೆ. 
 
ಆಡುವ 11 ಆಟಗಾರರು
ಸನ್ ರೈಸರ್ಸ್ ಹೈದರಾಬಾದ್: ಡಿ.ಎ.ವಾರ್ನರ್ (ನಾಯಕ), ಶಿಖರ್ ಧವನ್, ಕೆ.ಎಲ್.ರಾಹುಲ್, ಎನ್.ವಿ. ಓಜಾ (ವಿಕೆಟ್ ಕೀಪರ್), ಇಜೆಜಿ ಮಾರ್ಗನ್, ಆರ್‌ಎಸ್  ಬೋಪಾರಾ, ಎ. ಆಶೀಶ್ ರೆಡ್ಡಿ, ಕೆ.ವಿ. ಶರ್ಮಾ, ಪಿ ಕುಮಾರ್, ಬಿ ಕುಮಾರ್, ಡೇಲ್ ಸ್ಟೆಯ್ನ್  

ಡೆಲ್ಲಿ ಡೇರ್ ಡೆವಿಲ್ಸ್ : ಎಮ್ಎ ಅಗರವಾಲ್, ಎಸ್ಎಸ್ ಅಯ್ಯರ್, ಜೆಪಿ ಡ್ಯುಮಿನಿ (ನಾಯಕ ), ಯುವರಾಜ್ ಸಿಂಗ್, ಎಡಿ ಮ್ಯಾಥ್ಯೂಸ್, ಎಂ.ಕೆ. ತಿವಾರಿ, ಕೆ.ಎಂ. ಜಾಧವ್ (ವಿಕೆಟ್ ಕೀಪರ್ ), ಎನ್.ಎಂ ಕೌಲ್ಟರ್ ನೈಲ್, ಅಮಿತ್ ಮಿಶ್ರಾ, ಇಮ್ರಾನ್ ತಾಹಿರ್, ಡಿಜೆ ಮುತ್ತುಸ್ವಾಮಿ
 
ಡೆಲ್ಲಿ ಡೇರ್‌ಡೆವಿಲ್ಸ್ ಸತತ 11 ಪಂದ್ಯಗಳ ಸೋಲನ್ನು ಅಂತ್ಯಗೊಳಿಸಲು ನೆರವಾದ ಮಾಯಾಂಕ್ ಅಗರವಾಲ್, ಶನಿವಾರ ಗುಣಮಟ್ಟದ ವೇಗದ ಬೌಲಿಂಗ್ ದಾಳಿಯನ್ನು ಎದುರಿಸಬೇಕಾಗಿದೆ. ಯುವರಾಜ್ ಸಿಂಗ್ ಅವರಿಂದ ಭಾರತದ ಭರವಸೆಯ ಆಟಗಾರ ಎಂದು ಹೆಸರುಪಡೆದ ಮಾಯಾಂಕ್ ಭುವನೇಶ್ವರ್ ಕುಮಾರ್ ಸ್ಟೇನ್ ಮುಂತಾದ ಬೌಲರುಗಳನ್ನು ನಿಭಾಯಿಸಬೇಕಿದೆ. 

ವೆಬ್ದುನಿಯಾವನ್ನು ಓದಿ