ರಾಯಲ್ ಚಾಲೆಂಜರ್ಸ್ 29ಕ್ಕೆ 5 ವಿಕೆಟ್ ಬಿದ್ದಿದ್ದಾಗ 159 ರನ್ ಗುರಿಯನ್ನು ಬೆನ್ನಟ್ಟುವುದು ಪ್ರಯಾಸದ ಕೆಲಸವಾಗಿ ಕಂಡಿತ್ತು. ನಾಯಕ ಕೊಹ್ಲಿ ಸೊನ್ನೆಗೆ ಔಟಾಗಿದ್ದು ಕೂಡ ಅವರಿದ್ದ ಫಾರಂಗೆ ಹೋಲಿಸಿದಾಗ ರಿಪ್ಲೇನ ಬಿಲೀವ್ ಇಟ್ ಆರ್ ನಾಟ್ ಸರಣಿಯಿಂದ ನೇರವಾಗಿ ತೆಗೆದುಕೊಂಡ ಕಥೆಯಂತಿತ್ತು. ಆದರೆ ಟ್ವಿಟ್ಟರ್‌ನಲ್ಲಿ ಕೊಹ್ಲಿ ಗುರಿಯನ್ನು ಮುಟ್ಟಲಾಗದಿದ್ದರೆ ಡಿ ವಿಲಿಯರ್ಸ್ ಮುಟ್ಟುತ್ತಾರೆಂಬ ಆತ್ಮವಿಶ್ವಾಸದ ಮಾತುಗಳನ್ನು ಅನೇಕ ಮಂದಿ ಬರೆದಿದ್ದರು.