ಜಿಮ್‌, ಫಿಟ್ನೆಸ್ ಕೇಂದ್ರಗಳಲ್ಲಿ ಕೊಹ್ಲಿ 90 ಕೋಟಿ ರೂ. ಹೂಡಿಕೆ

ಮಂಗಳವಾರ, 21 ಏಪ್ರಿಲ್ 2015 (16:55 IST)
ಟೀಂ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಈಗ ಉದ್ಯಮ ಕ್ಷೇತ್ರಕ್ಕೂ ಕಾಲಿರಿಸಿದ್ದು, ಜಿಮ್ ಮತ್ತು ಫಿಟ್ನೆಸ್ ಉದ್ಯಮದಲ್ಲಿ 90 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಪಾಲುದಾರರಾದ ಚೈಸೆಲ್ ಫಿಟ್ನೆಸ್ ಮತ್ತು ಸಿಎಸ್‌ಸಿ ಜೊತೆ 190 ಕೋಟಿ ಯೋಜನೆಯ ಪೈಕಿ 90 ಕೋಟಿ ರೂ.ಗಳನ್ನು ಕೊಹ್ಲಿ ಹೂಡಿಕೆ ಮಾಡಿದ್ದಾರೆ. 
 
 ಜಿಮ್ ಸರಪಳಿಯನ್ನು ಚಿಸೆಲ್ ಬ್ರಾಂಡ್ ಹೆಸರಿನಲ್ಲಿ ಆರಂಭಿಸಲಾಗುತ್ತದೆ. ಕೊಹ್ಲಿ ಏಕದಿನ ನಾಯಕ ಎಂ.ಎಸ್. ಧೋನಿ ಅವರ ಹೆಜ್ಜೆಗುರುತನ್ನು ಅನುಸರಿಸಿದ್ದಾರೆ. ಧೋನಿ ಈಗಾಗಲೇ ಸ್ಫೋರ್ಟ್ಸ್ ಫಿಟ್ ಎಂಬ ಜಿಮ್ ಚೇನ್ ಹೊಂದಿದ್ದಾರೆ. ಫ್ಯಾಷನ್ ಮತ್ತು ಜಿಮ್ ಲೈನ್‌‌ಗೆ ಇಳಿಯುವುದಕ್ಕೆ ಮುನ್ನ ಇಂಡಿಯನ್ ಸೂಪರ್ ಲೀಗ್ ಟೀಮ್ ಎಫ್‌ಸಿ ಗೋವಾದಲ್ಲಿ ಕೊಹ್ಲಿ ಸಣ್ಣ ಶೇರು ಹೊಂದಿದ್ದರು.

ಇತ್ತೀಚಿನ ಕ್ರಿಕೆಟರುಗಳು  ಕ್ರಿಕೆಟ್ ಜೀವನದಿಂದ ನಿವೃತ್ತಿಯ ನಂತರ ತಮ್ಮ ಭವಿಷ್ಯವನ್ನು ಭದ್ರಗೊಳಿಸಿಕೊಳ್ಳಲು ಕೆಲವು ಉದ್ಯಮಗಳಲ್ಲಿ ಭಾರೀ ಹೂಡಿಕೆಗಳನ್ನು ಮಾಡುತ್ತಿದ್ದು, ಕೊಹ್ಲಿ ಕೂಡ ಅವರ ಪೈಕಿ ಒಬ್ಬರಾಗಿದ್ದಾರೆ. 
 

ವೆಬ್ದುನಿಯಾವನ್ನು ಓದಿ