ನಮ್ಮ ತಂಡ ಅತ್ಯಂತ ಸಮತೋಲಿತ: ವಿರಾಟ್ ಕೊಹ್ಲಿ ವಿಶ್ಲೇಷಣೆ

ಸೋಮವಾರ, 27 ಏಪ್ರಿಲ್ 2015 (15:36 IST)
ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ 10 ವಿಕೆಟ್ ಜಯಗಳಿಸಿದ  ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬ್ಯಾಟಿಂಗ್ ಮತ್ತು ಬೌಲಿಂಗ್‌ಗೆ ಸಂಬಂಧಿಸಿದಂತೆ ಅತ್ಯಂತ ಸಮತೋಲಿತ ತಂಡ ಎಂದು ನಾಯಕ ವಿರಾಟ್ ಕೊಹ್ಲಿ ವಿಶ್ಲೇಷಿಸಿದ್ದಾರೆ. 
 
ಡೇರ್ ಡೇವಿಲ್ಸ್ ತಂಡದ 95 ರನ್ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಪರ ಕ್ರಿಸ್ ಗೇಲ್ ಅವರ 62 ಮತ್ತು ವಿರಾಟ್ ಕೊಹ್ಲಿ ಅವರ 35 ರನ್ ನೆರವಿನಿಂದ 10.3ಓವರುಗಳಲ್ಲಿ ವಿಕೆಟ್ ಕಳೆದುಕೊಳ್ಳದೇ ಗುರಿ ಮುಟ್ಟಿತ್ತು. 
 
ನಮ್ಮ ತಂಡವು ಈಗ ಅತ್ಯುತ್ತಮ ಸಂಯೋಜಿತ ತಂಡವಾಗಿದ್ದು, ಟಿ20ಯಲ್ಲಿ ಸರಿಯಾದ ಸಮತೋಲನ ಹೊಂದಿರುವುದು ಅವಶ್ಯಕವಾಗಿದೆ ಎಂದು ಪಂದ್ಯದ ನಂತರದ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಕೊಹ್ಲಿ  ಹೇಳಿದರು. 
 
 ಕೊಹ್ಲಿ ಓಪನರ್ ಗೇಲ್ ಅವರನ್ನ ಕೂಡ ಶ್ಲಾಘಿಸಿದರು. ಅವರು ಹೊರಗಿನಿಂದ  ಕೂಲ್ ಆಗಿ ಕಂಡರೂ ಒಳಗಿನಿಂದ ತೀಕ್ಷ್ಣತೆ ಹೊಂದಿದ್ದಾರೆ ಎಂದು ವಿಶ್ಲೇಷಿಸಿದರು. 
 ನಮ್ಮ ತಂಡವು ಇದೇ ಗೆಲುವಿನ ಗತಿ ಮುಂದುವರಿಸಿಕೊಂಡು ಹೋಗಬೇಕು, ಅದನ್ನು ಕಳೆದುಕೊಳ್ಳಬಾರದು ಎಂದು 26 ವರ್ಷ ವಯಸ್ಸಿನ ನಾಯಕ ಅಭಿಪ್ರಾಯಪಟ್ಟರು. 
 
ಸ್ಟಾರ್ಕ್ ಮತ್ತು ವರುಣ್ ಆರೋನ್ ಕೆಟ್ಟ ಸಂಯೋಜನೆಯಲ್ಲ. ಆದರೆ ಅನುಭವಿ ಆಟಗಾರರಾಗಿರುವ ಅಗತ್ಯವಿದೆ. ಕಳೆದ ಪಂದ್ಯ ಮುಖ್ಯವಾಗಿದ್ದು, ಅಲ್ಲಿನ ಗೆಲುವು ಸಕಾಲಿಕವಾಗಿದೆ. ಗೆಲುವಿನ ಗತಿಯನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದ್ದು, ಅದನ್ನು ಕಳೆದುಕೊಳ್ಳಬಾರದು ಎಂದು ಕೊಹ್ಲಿ ಹೇಳಿದರು. 

ವೆಬ್ದುನಿಯಾವನ್ನು ಓದಿ