2023 ರಿಂದ ಮಹಿಳಾ ಐಪಿಎಲ್ ಆರಂಭಕ್ಕೆ ತಯಾರಿ ಶುರು

ಭಾನುವಾರ, 27 ಮಾರ್ಚ್ 2022 (09:10 IST)
ಮುಂಬೈ: ಪುರುಷರ ಐಪಿಎಲ್ ಜನಪ್ರಿಯವಾಗಿದ್ದು, ವಿಶ್ವದ ಶ್ರೀಮಂತ ಕ್ರೀಡಾಕೂಟವೆನಿಸಿಕೊಂಡಿದೆ. ಜೊತೆಗೆ ಹಲವು ಯುವ ಪ್ರತಿಭಾವಂತರಿಗೆ ವೇದಿಕೆಯಾಗಿದೆ. ಇದೀಗ ಮಹಿಳೆಯರ ಐಪಿಎಲ್ ಗೂ ಚಾಲನೆ ನೀಡಲು ತಯಾರಿ ಆರಂಭವಾಗಿದೆ.

ಐಪಿಎಲ್ ಆಡಳಿತ ಮಂಡಳಿ ಸಭೆಯ ಬಳಿಕ ಬಿಸಿಸಿಐ ಈ ತೀರ್ಮಾನಕ್ಕೆ ಬಂದಿದೆ. ಎಲ್ಲಾ ಸರಿ ಹೋದರೆ 2023 ರಿಂದ ಮಹಿಳೆಯರ ಐಪಿಎಲ್ ಶುರುವಾಗಲಿದೆ.

ಮೊದಲು ನಾಲ್ಕು ಪ್ರದರ್ಶನ ಪಂದ್ಯ ನಡೆಯಲಿದ್ದು, ಬಳಿಕ ಟೂರ್ನಿ ನಡೆಯಲಿದೆ. 5 ರಿಂದ 6 ತಂಡಗಳನ್ನೊಳಗೊಂಡ ಐಪಿಎಲ್ ಟೂರ್ನಿ ನಡೆಯಲಿದೆ. ಸದ್ಯದ ಲೆಕ್ಕಾಚಾರದ ಪ್ರಕಾರ ಪುಣೆಯಲ್ಲಿ ಪಂದ್ಯಗಳು ನಡೆಯಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ